ಮಹಾಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಅವ್ಯವಹಾರ ಆರೋಪ

ಉಡುಪಿ : ಮಹಾಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಮೇಲಿನ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ನ. 9ರಂದು ಉಡುಪಿಯ ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ಉಭಯ ಕಡೆಯವರು ತಮ್ಮ ಅಹವಾಲುಗಳೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಹಿಂದೆ ಇಲ್ಲಿ ಆಣೆ ಪ್ರಮಾಣ ಮಾಡುವ ಬಗ್ಗೆ ಎರಡು ಕಡೆಯವರು ನಿರ್ಧರಿಸಿದ್ದರು. ಆದರೆ ಅಷ್ಟ ಮಠದ ಸ್ವಾಮೀಜಿಯೊಬ್ಬರ ಮಧ್ಯಸ್ಥಿಕೆಯಲ್ಲಿ ಆಣೆ ಪ್ರಮಾಣದಿಂದ ಇತ್ತಂಡಗಳು ಹಿಂದಕ್ಕೆ ಸರಿದು, ಅದರ ಬದಲಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಾಜಿ ಶಾಸಕ ರಘುಪತಿ ಭಟ್ ಅವರೊಂದಿಗೆ ಆಗಮಿಸಿದ ಬ್ಯಾಂಕಿನ ಸಾಲಗಾರರು, ಬ್ಯಾಂಕ್ ಹೇಳುವಷ್ಟು ಸಾಲ ಪಡೆದಿಲ್ಲ. ನಮಗೆ ಮೋಸವಾಗಿದೆ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಇಂತಹ ಸುಳ್ಳು ಆರೋಪಗಳಿಂದ ಬ್ಯಾಂಕಿನ ಘನತೆಗೆ ಧಕ್ಕೆಯಾಗಿದೆ. ಬ್ಯಾಂಕಿನ ಬಳಿ ಎಲ್ಲಾ ಪೂರಕ ದಾಖಲೆಗಳು ಇವೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಶೆಟ್ಟಿ ಹಾಗು ಸಿಬ್ಬಂದಿ ಹೇಳಿ ಪ್ರಾರ್ಥನೆ ಸಲ್ಲಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಬುರ್ಖಾ ಹಾಕಿಕೊಂಡು, ಮೂರ್ತಿ ಪೂಜೆ ವಿರೋಧಿಸುವವರ ಮೇಲೆ ನನಗೆ ನಂಬಿಕೆ ಇಲ್ಲ. ದನದ ಮಾಂಸ ತಿಂದು ದೇವಾಲಯದಲ್ಲಿ ಆಣೆ ಪ್ರಮಾಣ ಮಾಡಿದರೇ ನಂಬುವುದಿಲ್ಲ ಎಂದರು.





























































































































error: Content is protected !!
Scroll to Top