ಗೊಮಟೇಶ್ವರ ಬೆಟ್ಟ ಬಳಿ ಓಮ್ನಿ – ಕಾರು ಅಪಘಾತ

ಕಾರ್ಕಳ : ಗೋಮಟೇಶ್ವರ ಬೆಟ್ಟ ಬಳಿ ಓಮ್ನಿ ಹಾಗೂ ಕಾರು ನಡುವೆ ಅಪಘಾತವಾಗಿ ಓಮ್ನಿ ಚಾಲಕ ಗಾಯಗೊಂಡಿರುವ ಘಟನೆ ನ. 9ರಂದು ನಡೆದಿದೆ. ಜೋಡುಕಟ್ಟೆಯಿಂದ ಕಾರ್ಕಳ ಕಡೆಗೆ ಸಾಗುತ್ತಿದ್ದ ಓಮ್ನಿ ಮತ್ತು ಕಾರ್ಕಳ ಕಡೆಯಿಂದ ಬರುತ್ತಿದ್ದ ಕಾರು ಡಿಕ್ಕಿಯಾಗಿದೆ. ಪರಿಣಾಮವಾಗಿ ಓಮ್ನಿ ಸಂಪೂರ್ಣವಾಗಿ ಜಖಂಗೊಂಡಿದ್ದು ಒಳಗಡೆ ಲಾಕ್‌ ಆಗಿದ್ದ ಕಾರಣ ಗಾಯಾಳು ಚಾಲಕ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ತಕ್ಷಣವೇ ಸ್ಥಳೀಯರು ಜಮಾಯಿಸಿದ್ದು ಕಾರ್ಕಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಓಮ್ನಿಯ ಡೋರ್‌ ಓಪನ್‌ ಮಾಡಲು ಸಾಧ್ಯವಾಗದೆ ಇದ್ದಾಗ ಕಾರ್ಕಳ ಅಗ್ನಿಶಾಮಕದವರನ್ನು ಕರೆಯಿಸಿ ಬೋಲ್ಟ್‌ ಕಟರ್‌ ಮೂಲಕ ಡೋರ್ ಕಟ್ ಮಾಡಿ ಓಪನ್ ಮಾಡಲಾಗಿದೆ. ಗಾಯಾಳುವನ್ನು ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಗಾಯಾಳುವನ್ನು ಮೂಡುಬಿದಿರೆಯ ಒಂಟಿಕಟ್ಟೆ ನಿವಾಸಿ ಸಂದೇಶ್‌ (35) ಎಂದು ಗುರುತಿಸಲಾಗಿದೆ.





























































































































error: Content is protected !!
Scroll to Top