ಬೆಂಗಳೂರು : ಬೆನ್ ಸ್ಟೋಕ್ಸ್ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸದಿರುವುದರಿಂದ ಎರಡು ವರ್ಷಗಳ ಕಾಲ ಐಪಿಎಲ್ನಿಂದ ಬ್ಯಾನ್ ಮಾಡಲಾಗಿದೆ. ಬಿಸಿಸಿಐನ ಹೊಸ ನಿಯಮದ ಪ್ರಕಾರ, ಮೆಗಾ ಹರಾಜಿನಲ್ಲಿ ನೋಂದಾಯಿಸದ ವಿದೇಶಿ ಆಟಗಾರರು ಮುಂದಿನ ವರ್ಷದ ಹರಾಜಿನಲ್ಲೂ ಭಾಗವಹಿಸಲು ಅರ್ಹರಲ್ಲ. ಸ್ಟೋಕ್ಸ್ ಮುಂಬರುವ ಆಷಸ್ ಸರಣಿಯ ಮೇಲೆ ಗಮನಹರಿಸುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗಿದೆ. ಈ ನಿಯಮದಿಂದಾಗಿ ಸ್ಟೋಕ್ಸ್ 2026ರ ಐಪಿಎಲ್ನಲ್ಲೂ ಆಡಲು ಸಾಧ್ಯವಾಗುವುದಿಲ್ಲ.
2025ರ ಐಪಿಎಲ್ ಮೆಗಾ ಹರಾಜಿಗೆ ವೇದಿಕೆ ಸಿದ್ಧವಾಗಿದ್ದು, ಇದೇ ತಿಂಗಳ ಅಂದರೆ ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಈ ಬಾರಿ ಮೆಗಾ ಹರಾಜಿಗೆ 1165 ಭಾರತೀಯ ಆಟಗಾರರು ಸೇರಿದಂತೆ ಒಟ್ಟು 1574 ಕ್ರಿಕೆಟಿಗರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 320 ಕ್ಯಾಪ್ಡ್ ಮತ್ತು 1224 ಅನ್ಕ್ಯಾಪ್ಡ್ ಆಟಗಾರರಿದ್ದಾರೆ. ಉಳಿದಂತೆ ಸಹವರ್ತಿ ದೇಶಗಳ 30 ಆಟಗಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.
ಆದರೆ, 1574 ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರ ಹೆಸರು ಇಲ್ಲ. ಅಂದರೆ ಬೆನ್ ಸ್ಟೋಕ್ಸ್ ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ. ಮುಂಬರುವ ಆಶ್ಯಸ್ ಸರಣಿಯ ಮೇಲೆ ಹೆಚ್ಚು ಗಮನಹರಿಸುವ ಕಾರಣಕ್ಕೆ ಸ್ಟೋಕ್ಸ್ ಈ ನಿರ್ಧಾರಕ್ಕೆ ಬಂದಿರಬಹುದು ಎಂದು ವರದಿಯಲ್ಲಿ ಹೇಳಲಾಗುತ್ತಿದೆ.































































