ಕಾರಿಗೆ ಲಾರಿ ಡಿಕ್ಕಿ – ನಾಲ್ವರಿಗೆ ಗಾಯ

ಕಾರ್ಕಳ : ಕಾರಿಗೆ ಲಾರಿ ಡಿಕ್ಕಿಯಾಗಿ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನ. 4ರಂದು ಮಾಳ ಘಾಟ್‌ನಲ್ಲಿ ಸಂಭವಿಸಿದೆ. ಮಂಗಳೂರಿನ ಅಭಿಜಿತ್‌ ಎಂಬವರು ಶೃಂಗೇರಿಯಿಂದ ಮಂಗಳೂರಿಗೆ ಕಾರು ಚಲಾಯಿಸಿಕೊಂಡು ಬರುತ್ತಿರುವಾಗ ಮಾಳ ಘಾಟ್‌ನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಜಗೋಳಿ ಕಡೆಯಿಂದ ಶೃಂಗೇರಿ ಕಡೆಗೆ ಬರುತ್ತಿದ್ದ ಲಾರಿಯನ್ನು ಅದರ ಚಾಲಕ ತಿರುವಿನಲ್ಲಿ ವಾಹನವೊಂದನ್ನು ಓವರ್ ಟೇಕ್ ಮಾಡುತ್ತಾ ರಸ್ತೆಯ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಅಭಿಜಿತ್‌ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮವಾಗಿ ಕಾರು ಜಖಂಗೊಂಡಿದ್ದು, ಅಭಿಜಿತ್‌ ಮತ್ತು ಕಾರಿನಲ್ಲಿದ್ದ ಅವರ ಪತ್ನಿ ದೀಪಾಲಿ ವೈಚಾಲ್, ಮಕ್ಕಳು ನೂಪುರ್ ವೈಚಾಲ್ ಹಾಗೂ ಸಾಯಿ ವೈಚಾಲ್ ಗಾಯಗೊಂಡಿರುತ್ತಾರೆ. ಈ ಬಗ್ಗೆ ಅಭಿಜಿತ್‌ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top