ಕಾರ್ಕಳ : ಟಿಪ್ಪರ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಮತ್ತು ಟಿಪ್ಪರನ್ನು ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್. ಮುಂಡ್ಕೂರು ಮುಂಡೇಲ್ ಪಾಂಡು ಹೋಟೇಲ್ ಬಳಿ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ. ಅ. 10ರಂದು ರಾತ್ರಿ 8.30ರ ವೇಳೆಗೆ ಗುರುಪುರದ ರಾಜೇಶ್ ಎಂಬವರ ಮಾಲೀಕತ್ವದ ಟಿಪ್ಪರ್‌ನಲ್ಲಿ ಮೂರು ಯುನಿಟ್ ಮರಳು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಕಿನ್ನಿಗೋಳಿಯಿಂದ ಈ ಮರಳನ್ನು ತರಲಾಗಿದೆ ಎಂದು ಚಾಲಕ ವಿಚಾರಣೆ ವೇಳೆ ತಿಳಿಸಿದ್ದಾನೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಡ್ಕೂರು : ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ವಶ























