ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ಸಾಂಸ್ಕೃತಿಕ ಕಾರ್ಯಕ್ರಮ
ಕಾರ್ಕಳ : ಸಂಘಟನೆಯೊಂದಿಗೆ ನಮ್ಮ ಪೂರ್ವಜರು ಕಲಿಸಿಕೊಟ್ಟ ಭಾಷೆ, ಸಂಸ್ಕೃತಿಯನ್ನು ಬೆಳಸಿ ಸೇವೆಯನ್ನು ಮಾಡುವ ಮೂಲಕ ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯು ಮುಂದುವರೆಯುತ್ತಿದೆ ಎಂದು ಪಡುಕುತ್ಯಾರು ಶ್ರೀ ಸರಸ್ವತೀ ಮಾತೃಮಂಡಳಿ ಉಪಾಧ್ಯಕ್ಷೆ ಕೆ. ರಮಾ ಅಚ್ಚುತ ಆಚಾರ್ಯ ತಿಳಿಸಿದರು. ಅವರು ಅ. 6ರಂದು ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಜರುಗಿದ ಉದ್ಘಾಟಿಸಿ ಮಾತನಾಡಿದರು. ಗಂಡುಕಲೆಯಾದ ಯಕ್ಷಗಾನ ತಾಳಮದ್ದಲೆಯಲ್ಲಿ ಉತ್ತಮ ಅರ್ಥಗಾರಿಕೆ ನೀಡುವ ಮೂಲಕ ವಿಶ್ವಕರ್ಮರ ಪ್ರಥಮ ಮಹಿಳಾ ತಾಳಮದ್ದಲೆ ತಂಡವನ್ನು ರಚಿಸಿ ಸಮಾಜದಲ್ಲಿ ವಿವಿಧ ಚಟುಚಟಿಕೆಯಲ್ಲಿ ಮುಂದುವರೆಯುತ್ತಿರುವ ಮಹಿಳಾ ಮಂಡಳಿಗೆ ಶುಭವನ್ನು ಹಾರೈಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನೆಕ್ಲಾಜೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷೆ ನಳಿನಿ ವಿಜೇಂದ್ರ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಬಜಗೋಳಿ ಶ್ರೀ ಸಾಯಿಕೃಪಾ ಜ್ಯುವೆಲ್ಲರ್ಸ್ ಮಾಲಕರು ಪ್ರಸಾದ್ ಸಿ. ಆಚಾರ್ಯ, ಕಾರ್ಕಳ ನಗರ ಎಎಸ್ಐ ಜಯಂತ ಆಚಾರ್ಯ, ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು, ಪಿ. ರವಿ ಆಚಾರ್ಯ ಪೆರ್ವಾಜೆ, ಮತ್ತು ಕೆ. ಸುರೇಶ್ ಆಚಾರ್ಯ ನಿಟ್ಟೆ ಉಪಸ್ಥಿತರಿದ್ದರು.


ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ಸಾಂಸ್ಕೃತಿಕ ಕಾರ್ಯಕ್ರಮ
ಪ್ರತಿಭಾ ಪುರಸ್ಕಾರದಲ್ಲಿ 2023/24ನೇ ಸಾಲಿನ ದ್ವಿತೀಯ ಪಿಯುಸಿಯ ಅತೀ ಹೆಚ್ಚು ಅಂಕಗಳಿಸಿ ಸಮಾಜಕ್ಕೆ ಕೀರ್ತಿ ತಂದ ಎಂಟು ವಿದ್ಯಾರ್ಥಿಗಳು, ಹತ್ತನೇಯ ತರಗತಿಯ ಏಳು ಜನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿನಮ್ರ ಆಚಾರ್ಯ ಮತ್ತು ಸಿ.ಎ. ಫೌಂಡೇಶನ್ನಲ್ಲಿ ಅತಿಹೆಚ್ಚು ಅಂಕ ಗಳಿಸಿದ ಅನುಶ್ರೀ ಹಾಗೂ ಅಮರ ಶಿಲ್ಪಿ ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಶಿಲ್ಪಿ ರಾಮಚಂದ್ರ ಆಚಾರ್ಯ ಮತ್ತು ಜಯಕರ್ನಾಟಕ ವೇದಿಕೆ ಉಡುಪಿ ನೀಡಿರುವ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಗೀತಾಚಂದ್ರ ಅವರನ್ನು ಸನ್ಮಾನಿಸಲಾಯಿತು.

ನವರಾತ್ರಿಯ ಪ್ರಯುಕ್ತ ಸಮಾಜದ ವಿದ್ಯಾರ್ಥಿಗಳಿಗೆ ಮತ್ತು ಸದಸ್ಯರಿಗೆ ಆಟೋಟ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಪ್ರಾರ್ಥನೆಯನ್ನು ಶೋಭಾ ಆಚಾರ್ಯ ನೆರವೇರಿಸಿ, ಮಂಡಳಿಯ ಮಾಜಿ ಅಧ್ಯಕ್ಷೆ ಜ್ಯೋತಿ ರವಿ ಸ್ವಾಗತಿಸಿದರು. ಕಾರ್ಯದರ್ಶಿ ಗೀತಾ ಚಂದ್ರ ಪ್ರತಿಭಾ ಪುರಸ್ಕಾರ ಮತ್ತು ಅಕ್ಷತಾ ಪ್ರಶಾಂತ್ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಮಾಜಿ ಅಧ್ಯಕ್ಷೆ ರಮಾ ನವೀನ್ ಧನ್ಯವಾದವಿತ್ತರು. ಕೋಶಾಧಿಕಾರಿ ಜ್ಯೋತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು.
































































