ಕಾರ್ಕಳ : ಗೋವಾದಲ್ಲಿ ನಡೆದ ಟೆಕ್ವಾಂಡೋ ಇಂಟರ್ನ್ಯಾಷನಲ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಸಂತ ಮರಿಯ ಗೊರಟ್ಟಿ ಆಂಗ್ಲ ಮಾಧ್ಯಮ ಶಾಲೆಯ ಪ್ರಥಮ್ ಎಸ್. ಶೆಟ್ಟಿ ಬೆಳ್ಳಿ ಮತ್ತು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಹಿರ್ಗಾನ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಶೆಟ್ಟಿ ಮತ್ತು ಜ್ಯೋತಿ ಸಂತೋಷ್ ಶೆಟ್ಟಿ ದಂಪತಿಯ ಪುತ್ರ.
ಸಾಧಕ ವಿದ್ಯಾರ್ಥಿಗೆ ಸಂಸ್ಥೆಯ ಸಂಚಾಲಕರು, ಮುಖ್ಯ ಶಿಕ್ಷಕರು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದ ಅಭಿನಂದಿಸಿದ್ದಾರೆ.
ಟೆಕ್ವಾಂಡೋ ಇಂಟರ್ನ್ಯಾಷನಲ್ ಚಾಂಪಿಯನ್ ಶಿಪ್ – ಪ್ರಥಮ್‌ಗೆ ಬೆಳ್ಳಿ ಮತ್ತು ಕಂಚು































































