ಸುಳ್ಯ: ವೈಯಕ್ತಿಕ ಫೇಸ್‌ಬುಕ್ ಚಾಟ್‌ನಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಉಲ್ಲೇಖಿಸಿದ ಸಂಬಂಧ ಬೆಳ್ಳಾರೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್‌ಬುಕ್ ಪೋಸ್ಟ್‌ನಲ್ಲಿ ಇಬ್ಬರ ಹೆಸರು ವ್ಯಕ್ತಿಯೋರ್ವರು ಪೋಸ್ಟ್ ಮಾಡಿರುವುದು ಚರ್ಚೆಗೆ ಕಾರಣವಾಗಿತ್ತು. ಘಟನೆ ಬಗ್ಗೆ ಇತ್ತಂಡಗಳಿಂದ ಬೆಳ್ಳಾರೆ ಠಾಣೆಗೆ ದೂರು ನೀಡಲಾಗಿದೆ.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಉಲ್ಲೇಖಿಸಿ ಹಾಗೂ ವಿವಿಧ ಆರೋಪಗಳನ್ನು ಹೊರಿಸಿ ಇಬ್ರಾಹಿಂ ಖಲೀಲ್ ಎಂಬವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಇದು ವೈರಲ್ ಆಗಿ ವಿವಿಧ ರೀತಿಯಲ್ಲಿ ಚರ್ಚೆಗಳಿಗೆ ಕಾರಣವಾಗಿತ್ತು. ಜಮಾಲ್ ಮತ್ತು ಅಜರುದ್ದೀನ್ ಎಂಬಿಬ್ಬರ ವಿರುದ್ಧ ವಿವಿಧ ಆರೋಪ ಹೊರಿಸಿ ಬರಹವನ್ನು ಪೋಸ್ಟ್ ಮಾಡಲಾಗಿದ್ದು, ಇದರಲ್ಲಿ ಪ್ರವೀಣ್ ಪ್ರಕರಣ ಉಲ್ಲೇಖವಾಗಿತ್ತು.
ಈ ಸಂಬಂಧ ನಿಂತಿಕಲ್ಲು ಸಮೀಪದ ಇಬ್ರಾಹಿಂ ಖಲೀಲ್ ವಿರುದ್ಧ ಬೆಳ್ಳಾರೆ ಜಮಾತ್‌ನವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನೊಂದೆಡೆ 2018ರಿಂದ ಬೆಳ್ಳಾರೆಯ ಜಮಾಲ್ ಮತ್ತು ಅಜರುದ್ದೀನ್ ಅವರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಇಬ್ರಾಹಿಂ ಖಲೀಲ್ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ. ವೈಯಕ್ತಿಕ ವಿಚಾರದಲ್ಲಿ ಮಾಡಿದ ಆರೋಪಗಳು ಈಗ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಆಗಿದೆ.
ಫೇಸ್‌ಬುಕ್ ಪೋಸ್ಟ್‌ನಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಉಲ್ಲೇಖ : ಕೇಸ್ ದಾಖಲು































































