ಹೆಬ್ರಿ : ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮುನಿಯಾಲು ಇದರ ನೂತನ ಅಧ್ಯಕ್ಷರಾಗಿ ಜನಪ್ರಿಯ ರೈಸ್ ಮಿಲ್ ಪಾಲುದಾರ, ಕಾಡುಹೊಳೆಯ ಮಂಜುನಾಥ ಟಿ., ಪ್ರಧಾನ ಕಾರ್ಯದರ್ಶಿಯಾಗಿ ಮಾತಿಬೆಟ್ಟುವಿನ ರತ್ನಾಕರ ಪೂಜಾರಿ ಪೆರ್ಮಾನ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮಾತಿಬೆಟ್ಟುವಿನ ಸಂಘದ ಸಭಾಂಗಣದಲ್ಲಿ ಹರೀಶ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ, ಕೋಶಾಧಿಕಾರಿಯಾಗಿ ರಾಜು ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಭಾಸ್ಕರ್ ಮಾಬಿಯಾನ್ ಅವರನ್ನು ಆಯ್ಕೆ ಮಾಡಲಾಯಿತು.
ಸಂಘದ ಗೌರವಾಧ್ಯಕ್ಷ ಎಸ್.ಟಿ. ಕುಂದರ್, ಸ್ಥಾಪಕ ಅಧ್ಯಕ್ಷ ಎಂ. ಆನಂದ ಪೂಜಾರಿ, ವಿಠ್ಠಲ ಪೂಜಾರಿ ವರಂಗ, ಜನಪ್ರಿಯ ರೈಸ್ ಪಾಲುದಾರ ಮಂಜುನಾಥ ಕೆ., ಸತೀಶ್ ಪೂಜಾರಿ ಎಲ್ಲಾರೆ, ಸಂಜೀವ ಪೂಜಾರಿ ಕಂಟಿಬೆಟ್ಟು, ಪ್ರದೀಪ್ ಡಿ. ಸಾಲಿಯಾನ್, ಪ್ರಕಾಶ್ ಪೂಜಾರಿ ವರಂಗ, ಚೆಲುವಯ್ಯ ಪೂಜಾರಿ ವರಂಗ, ಶಂಕರ್ ಪೂಜಾರಿ ಪಡುಕುಡೂರು, ವಸಂತ ಪೂಜಾರಿ ಮಾತಿಬೆಟ್ಟು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮುನಿಯಾಲು ನೂತನ ಪದಾಧಿಕಾರಿ ರಚನೆ


























