ಪೆರ್ಡೂರು ದೇವಳಕ್ಕೆ ಧಕ್ಕೆಯಾಗದಂತೆ ಹೆದ್ದಾರಿ ನಿರ್ಮಿಸಲು ಹೈಕೋರ್ಟ್‌ ಸೂಚನೆ

ಹೆಬ್ರಿ: ಪೆರ್ಡೂರಿನ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಅನಂತ ಪದ್ಮನಾಭ ದೇವಾಲಯದ ನಾಗವನ ಹಾಗೂ ವಾಸ್ತು ಪರಿಧಿಗೆ ಧಕ್ಕೆ ಆಗದಂತೆ ರಾಷ್ಟ್ರೀಯ ಹೆದ್ದಾರಿ-169ಎ ನಿರ್ಮಿಸಲು ಹೈಕೋರ್ಟ್ ಆದೇಶ ಸೂಚಿಸಿದೆ.
ಮಲ್ಪೆ-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೆರ್ಡೂರು ಭಾಗದಲ್ಲಿ ದೇವಸ್ಥಾನಕ್ಕೆ ತಾಗಿಕೊಂಡು ಹಾದು ಹೋಗುವ ನೀಲನಕ್ಷೆ ತಯಾರಾಗಿದೆ. ಇದನ್ನು ಸ್ಥಳೀಯರಾದ ರಂಜಿತ್‌ ಪ್ರಭು ಕೋರ್ಟ್‌ನಲ್ಲಿ ಪ್ರಶ್ನಿಸಿ ದೇಗುಲಕ್ಕೆ ಧಕ್ಕೆಯಾಗುವುದನ್ನು ತಡೆಯುವಂತೆ ಮನವಿ ಮಾಡಿದ್ದರು.
ಬಳಿಕ ದೇವಸ್ಥಾನದ ಆಡಳಿತ ಮಂಡಳಿಯೂ ಹೆದ್ದಾರಿ ಕಾಮಗಾರಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದೆ. ನಕ್ಷೆ ಪ್ರಕಾರ ಹೆದ್ದಾರಿಯು ದೇವಾಲಯದ ರಥಬೀದಿ, ನಾಗವನ ಇರುವ ಜಾಗದಲ್ಲೇ ಹಾದು ಹೋಗಲಿದೆ. ಇದರಿಂದ ದೇವಾಲಯ ಮೂಲ ಸ್ವರೂಪವನ್ನು ಕಳೆದುಕೊಳ್ಳಲಿದೆ ಹಾಗೂ ವಾಸ್ತುವಿಗೆ ಧಕ್ಕೆ ಅಗಲಿದೆ. ಆದ್ದರಿಂದ ಪರ್ಯಾಯ ಸಾಧ್ಯತೆ ಬಗ್ಗೆ ಪರಿಶೀಲಿಸಲು ಸಲಹೆ ನೀಡುವಂತೆ ನ್ಯಾಯವಾದಿ ಕೇತನ್‌ ಕುಮಾರ್‌ ಬಂಗೇರ ಅವರು ದೇಗುಲದ ಪರವಾಗಿ ಮನವಿ ಮಾಡಿದ್ದರು.

ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಪುರಾತನ ಇತಿಹಾಸ ಹೊಂದಿರುವ ದೇವಸ್ಥಾನಗಳನ್ನು ರಕ್ಷಿಸಬೇಕಿದೆ. ಈ ಭಾಗದಲ್ಲಿ ಪರ್ಯಾಯ ಮಾರ್ಗದ ಸಾಧ್ಯತೆ ಬಗ್ಗೆ ಪರಿಶೀಲಿಸಬೇಕು. ಬೆಂಗಳೂರಿನ ಕೋರ್ಟ್‌ ಪಕ್ಕದ ಕಟ್ಟಡ ನೆಲಸಮಕ್ಕೆ ವಿರೋಧ ಇಋುವಾಗ ದೇವಸ್ಥಾನಕ್ಕೆ ಧಕ್ಕೆ ಅಗುವುದನ್ನು ತಡೆಯಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದೆ. ರಸ್ತೆ ಅಗಲಗೊಳಿಸುವುದು ಅಥವಾ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡುವಾಗ ದೇವಾಲಯ ಸಹಿತ ಧಾರ್ಮಿಕ ಕಟ್ಟಡಗಳಿಗೆ ಧಕ್ಕೆ ಆಗುವುದಾದರೆ ಅಂತಹ ಸಂದರ್ಭಗಳಲ್ಲಿ ಸಂಬಂಧಿಸಿದ ಪ್ರಾಧಿಕಾರ ಪರ್ಯಾಯ ಮಾರ್ಗಗಳನ್ನು ಬಳಸಬಹುದು ಎಂದರು.

ಪೆರ್ಡೂರು ಮೇಲ್ಪೇಟೆಯಿಂದ ದೇವಸ್ಥಾನಕ್ಕೆ ಸಂಬಂಧಪಟ್ಟ ಖಾಲಿ ಜಾಗದ ಮೂಲಕ ಹಾದು ಬಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪ ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಪರ್ಯಾಯ ಮಾರ್ಗವನ್ನು ಬಳಸಬಹುದು ಎಂದು ಸ್ಥಳೀಯರು ಹೆದ್ದಾರಿ ಇಲಾಖೆಗೆ ತಿಳಿಸಿದ್ದಾರೆ. ಇಲ್ಲೂ ದೇವಸ್ಥಾನದ ಶೇ. 80ರಷ್ಟು ಜಾಗ ರಸ್ತೆಗೆ ಹೋಗುತ್ತದೆ. ಆದರೆ ದೇಗುಲದ ವಾಸ್ತುವಿಗೆ ಹಾನಿಯಾಗದು. ಇಲಾಖೆಯ ನಕ್ಷೆ ಪ್ರಕಾರ ಕಾಮಗಾರಿ ನಡೆದರೆ ಹಲವು ಅಂಗಡಿ, ಮನೆಗಳು, ರಾಮ ಮಂದಿರ, ನಾಗಬನಕ್ಕೂ ಧಕ್ಕೆಯಾಗುವುದಲ್ಲದೆ, ದೇವಸ್ಥಾನದ ವಾಸ್ತು ನಾಶವಾಗಲಿದೆ.









































































































error: Content is protected !!
Scroll to Top