ಎರ್ಲಪಾಡಿ : ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಸಾವು

ಕಾರ್ಕಳ : ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರು ಸಾವನಪ್ಪಿದ ಘಟನೆ ಆ. 19ರಂದು ಎರ್ಲಪಾಡಿ ಗ್ರಾಮದಲ್ಲಿ ಸಂಭವಿಸಿದೆ. ಪ್ರಶಾಂತ (43) ಮೃತ ವ್ಯಕ್ತಿ. ಇವರು ವಿಪರೀತ ಕುಡಿತದ ಅಭ್ಯಾಸ ಹೊಂದಿದ್ದು, ಉದಯಗಿರಿಯಲ್ಲಿರುವ ತಂಗಿಯ ಮನೆಯಲ್ಲಿ ವಾಸವಾಗಿದ್ದರು. ಆ. 17ರಂದು ಪ್ರಶಾಂತ್‌ ಅವರಿಗೆ ವಿಪರೀತ ಜ್ವರ ಕಾಣಿಸಿಕೊಂಡಿದ್ದು, ನಂತರ ಜಾಂಡೀಸ್ ಕಾಯಿಲೆ ಇರುವುದಾಗಿ ಗಮನಕ್ಕೆ ಬಂದಿರುತ್ತದೆ. ಚಿಕಿತ್ಸೆಗಾಗಿ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕರಿಯಾಗದೇ ಪ್ರಶಾಂತ್‌ ಆ. 19ರಂದು ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top