ನಿಲ್ಲಿಸಿದ್ದ ಸ್ಕೂಟಿಗೆ ಡಿಕ್ಕಿ : ಸವಾರನಿಗೆ ಗಾಯ

ಕಾರ್ಕಳ : ನಿಲ್ಲಿಸಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಾಯಗೊಂಡ ಗಾಯಗೊಂಡ ಘಟನೆ ಆ. 18 ರಂದು ಸಂಭವಿಸಿದೆ. ಪ್ರಕಾಶ್‌ ಎಂಬವರು ಕೆರ್ವಾಶೆಯ ಅಂಗಡಿಯೊಂದರಲ್ಲಿ ವಸ್ತುಗಳನ್ನು ಖರೀದಿಸಿ ಅಜೆಕಾರು ಕಡೆಗೆ ಹೋಗಲು ಸಿದ್ಧವಾಗುತ್ತಿದ್ದ ಸಂದರ್ಭ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟಿಗೆ ಅಜೆಕಾರು ಕಡೆಯಿಂದ ಸವಾರಿ ಮಾಡಿಕೊಂಡು ಬಂದ ಸ್ಕೂಟಿ ಡಿಕ್ಕಿಯಾಗಿದೆ. ಪರಿಣಾಮವಾಗಿ ಪ್ರಕಾಶ್ ಅವರು‌ ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top