ಸೆ. 15 : ಯೂತ್ ಬಿಲ್ಲವ – ಬಿರ್ವೆರೆ ಕೆಸರ್ದ ಗೊಬ್ಬು

ಕಾರ್ಕಳ : ಸಂಘಟನೆಯಡಿಯಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಮನರಂಜನಾತ್ಮಕ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಸಮುದಾಯವನ್ನು ಒಗ್ಗೂಡಿಸೋಣ. ತನ್ಮೂಲಕ ಸಮುದಾಯದ ಅಭಿವೃದ್ಧಿಯಲ್ಲಿ ಜೊತೆಯಾಗೋಣ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು.
ಅವರು ಆ. 15 ರಂದು ಪೆರ್ವಾಜೆ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ನಡೆದ ಯೂತ್‌ ಬಿಲ್ಲವ (ರಿ.) ಕಾರ್ಕಳ ಇದರ ನೇತೃತ್ವದಲ್ಲಿ ಕಾರ್ಕಳ ವಿಧಾನಸಭಾ ವ್ಯಾಪ್ತಿಯ ಸಮಸ್ತ ಬಿಲ್ಲವ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೆ. 15ರಂದು ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆಯಲಿರುವ ಬಿರ್ವೆರೆ ಕೆಸರ್ದ ಗೊಬ್ಬು ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಘಟನೆಯ ಗೌರವಾಧ್ಯಕ್ಷ ಡಿ. ಆರ್.‌ ರಾಜು ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗೆ ಸರ್ವರ ಸಹಕಾರ ಅವಶ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದರು.
ವಾಸ್ತುತಜ್ಞ ಪ್ರಮಲ್‌, ಅಶೋಕ್ ಸುವರ್ಣ,‌ ಪ್ರವೀಣ್‌ ಕೋಟ್ಯಾನ್‌, ಯುವವಾಹಿನಿ ಕಾರ್ಕಳ ಘಟಕದ ಮಾಜಿ ಅಧ್ಯಕ್ಷ ತಾರಾನಾಥ ಕೋಟ್ಯಾನ್‌, ಶಿಕ್ಷಕ ಆನಂದ ಪೂಜಾರಿ, ಸಂಘಟನೆಯ ಸ್ಥಾಪಕಾಧ್ಯಕ್ಷ ಭರತ್‌ ಸಿ. ಅಂಚನ್, ಅಧ್ಯಕ್ಷ ಸುಕೇಶ್‌ ಕರ್ಕೇರ, ಗೋಪಾಲ ಪೂಜಾರಿ ನೆಲ್ಲಿಕಾರು ಸೇರಿದಂತೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಬಿಲ್ಲವ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಳಿನಿ ಎಸ್.‌ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು.







































error: Content is protected !!
Scroll to Top