ಕಾರ್ಕಳ : ಕೆರ್ವಾಶೆ ಬಿಲ್ಲವ ಕುಟುಂಬ ಸಮ್ಮಿಲನ ಕಾರ್ಯಕ್ರಮ ಆ. 18ರಂದು ಅದ್ರಬೈಲು ಭೋಜ ಪೂಜಾರಿಯವರ ಗದ್ದೆಯಲ್ಲಿ ನಡೆಯಿತು. ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ. ಆರ್. ರಾಜು ದೀಪ ಬೆಳಗಿಸಿ ಕಾರ್ಯಕ್ರಮದ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕುಟುಂಬ ಸಮ್ಮಿಲನದ ಕಾರ್ಯಕ್ರಮದಡಿಯಲ್ಲಿ ಕ್ರೀಡಾಕೂಟದ ಆಯೋಜನೆಯೊಂದಿಗೆ ಗ್ರಾಮೀಣ ಮಟ್ಟದಲ್ಲಿ ಸಮುದಾಯವನ್ನು ಒಗ್ಗೂಡಿಸುವುತ್ತಿರುವುದು ಶ್ಲಾಘನೀಯ ಎಂದರು.
ಸನ್ಮಾನ
ಉದ್ಯಮಿ, ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ. ಆರ್ ರಾಜು, ಧ. ಗ್ರಾ. ಯೋಜನೆಯ ಬಿ. ಸಿ ಟ್ರಸ್ಟ್(ರಿ.)ನ ನಿರ್ದೇಶಕ ದಿನೇಶ್ ಎಂ. ಹಾಗೂ ಬೀಡಿ ಉದ್ಯಮಿ ನಾಗರಾಜ್ ಅಮೀನ್ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಕುಟುಂಬ ಸಮ್ಮಿಲನದ ಅಧ್ಯಕ್ಷ ದಿನೇಶ್ ಪೂಜಾರಿ ಶೆಟ್ಟಿಬೆಟ್ಟು, ಶ್ರೀ. ಕ್ಷೇ. ಧ. ಗ್ರಾ. ಯೋಜನೆಯ ಬಿ. ಸಿ. ಟ್ರಸ್ಟ್ ನಿರ್ದೇಶಕ ದಿನೇಶ್ ಎಂ., ಬಿಲ್ಲವ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಬಂಗೇರ, ಬಜಗೋಳಿ ಭಾರತೀಯ ಜನೌಷಧಿ ಕೇಂದ್ರದ ಮುಖ್ಯಸ್ಥ ಸುಶಾಂತ್ ಬಜಗೋಳಿ, ಕಾರ್ಕಳ ಯುವವಾಹಿನಿ ಘಟಕದ ಅಧ್ಯಕ್ಷೆ ಮಮತಾ ಅಂಚನ್, ಮಾಳ-ಕೆರ್ವಾಶೆ ವ್ಯ. ಸೇ. ಸ. ಸಂಘದ ಅಧ್ಯಕ್ಷ ಅನಿಲ್ ಪೂಜಾರಿ, ನಾಗರಾಜ್ ಅಮೀನ್ ಮಣಿಕಂಠ, ಕೆರ್ವಾಶೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನೀತಾ ಪೂಜಾರ್ತಿ ಹಾಗೂ ಗದ್ದೆಯ ಮಾಲಕ ಭೋಜ ಪೂಜಾರಿ ಉಪಸ್ಥಿತರಿದ್ದರು.

ಸಮಾರೋಪ
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ. ಸ. ಸೇ. ಸಂಘ ಗ್ರಾಮ ಸಮಿತಿ ಕೆರ್ವಾಶೆ ಇದರ ಅಧ್ಯಕ್ಷ ಪ್ರಕಾಶ್ ಪೂಜಾರಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಯುಷ್ಯ ಮಂಡಲಂ ಯುಟ್ಯೂಬ್ ಚಾನೆಲ್‌ನ ಮುಖ್ಯಸ್ಥ ದಯಾನಂದ ಸಾಲ್ಯಾನ್ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭ ಯೂತ್ ಬಿಲ್ಲವ ರಿ. ಕಾರ್ಕಳ ಇದರ ಅಧ್ಯಕ್ಷ ಸುಕೇಶ್ ಕರ್ಕೇರ, ಉಪಾಧ್ಯಕ್ಷ ರವಿ ಪೂಜಾರಿ, ಕೆರ್ವಾಶೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಯ ಪೂಜಾರಿ, ಆಯುಷ್ಯ ಮಂಡಲಮ್ ಸಂಸ್ಥೆಯ ಮುಖ್ಯಸ್ಥ ದಯಾನಂದ ಸಾಲ್ಯಾನ್ ಉಪಸ್ಥಿತರಿದ್ದರು.
15 ವಿವಿಧ ಬಗೆಯ ಆಟೋಟ ಸ್ಪರ್ಧೆಗಳಲ್ಲಿ ಸುಮಾರು 600 ಮಂದಿ ಭಾಗವಹಿಸಿದ್ದರು. ಹರೀಶ್ ಪೂಜಾರಿ ಸ್ವಾಗತಿಸಿ, ಪ್ರಶಾಂತ್ ಬಜಗೋಳಿ ವಂದಿಸಿದರು. ಅಜಿತ್ ಪೂಜಾರಿ ಅಂಡಾರು ಮತ್ತು ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.



















