ನಂಬಿಕೆಗಳ ಕ್ರಿಯಾ ರೂಪವೇ ಆಚರಣೆ – ಡಾ. ಪೂವಪ್ಪ ಕಣಿಯೂರು

ಕಾರ್ಕಳ : ನಂಬಿಕೆಗಳ ಕ್ರಿಯಾ ರೂಪವೇ ಆಚರಣೆ ಎಂದು ಸುಳ್ಯ ನೆಹರು ಮೆಮೋರಿಯಲ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ. ಪೂವಪ್ಪ ಕಣಿಯೂರು ಅಭಿಪ್ರಾಯಪಟ್ಟರು. ಹೋಟೆಲ್ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಕಳ ಸಾಹಿತ್ಯ ಸಂಘದ ಮಾಸಿಕ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ʼನಾಗಾರಾಧನೆ ಜನಪದ ದೃಷ್ಟಿಕೋನʼ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು
ಸಂಘದ ಕಾರ್ಯಾಧ್ಯಕ್ಷ ಕೆ.ಪಿ. ಶೆಣೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಎಸ್. ನಿತ್ಯಾನಂದ ಪೈ ವೇದಿಕೆಯಲ್ಲಿದ್ದರು. ಕೆ. ಕೆ. ನಂಬಿಯಾರ್ ಕಾರ್ಯಕ್ರಮ ನಿರೂಪಿಸಿ. ಕಾರ್ಯದರ್ಶಿ ಬಿ. ಕೆ. ಈಶ್ವರ ಮಂಗಲ ಅವರು ವಂದಿಸಿದರು. ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಚಿಪ್ಲೊಂಕರ್ ಹಾಗೂ ವೈ. ಅನಂತಪದ್ಮನಾಭ ಭಟ್ ಸಹಕರಿಸಿದರು.































































































































error: Content is protected !!
Scroll to Top