ಹೆಚ್ಚು ದಕ್ಷಿಣೆ ಹಾಕಲು ಹೇಳಿದ ಕುಕ್ಕೆ ಕ್ಷೇತ್ರದ ಅರ್ಚಕ ಅಮಾನತು

ಮಂಗಳೂರು: ಭಕ್ತರಿಂದ ಹೆಚ್ಚಿನ ದಕ್ಷಿಣೆಗಾಗಿ ಬೇಡಿಕೆಯಿಟ್ಟ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅರ್ಚಕರೊಬ್ಬರನ್ನು ಕಾರ್ಯನಿರ್ವಹಣಾಧಿಕಾರಿ ಅಮಾನತು ಮಾಡಿದ್ದಾರೆ.
ಸರ್ಪ ಸಂಸ್ಕಾರ ಪೂಜೆ ಮಾಡಿಸಲು ಆಂಧ್ರಪ್ರದೇಶದಿಂದ ಬಂದಿದ್ದ ಕುಟುಂಬವೊಂದರಿಂದ ಅರ್ಚಕ ಶಿವಪ್ರಕಾಶ್‌ ಪಾಂಡೇಲು ಎಂಬವರು ಹೆಚ್ಚು ದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ವಿಚಾರ ಕಾರ್ಯನಿರ್ವಹಣಾಧಿಕಾರಿ ಗಮನಕ್ಕೆ ಬಂದು ಅರ್ಚಕರನ್ನು ಅಮಾನತಿನಲ್ಲಿಡಲಾಗಿದೆ.
ಸರ್ಪ ಸಂಸ್ಕಾರ ಸೇವೆ ಮುಗಿದ ಬಳಿಕ ಭಕ್ತರು ತಟ್ಟೆಯಲ್ಲಿ ಒಂದಷ್ಟು ದಕ್ಷಿಣೆ ಹಾಕಿ ಕೊಟ್ಟಿದ್ದಾರೆ. ಇದು ಸಾಕಾಗಲಿಲ್ಲ ಎಂದು ಪಾಂಡೇಲು ತಟ್ಟೆಯನ್ನು ದೂರ ತಳ್ಳಿದ್ದಾರೆ. ಇದರಿಂದ ಮನನೊಂದ ಭಕ್ತರು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದರು. ಶಿವಪ್ರಕಾಶ್‌ ಪಾಂಡೇಲು ವಿರುದ್ಧ ಈ ಹಿಂದೆಯೂ ಇದೇ ಮಾದರಿಯ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಕೂಡಲೇ ಆಡಳಿತಾಧಿಕಾರಿ ಅವರನ್ನು ಅಮಾನತುಗೊಳಿಸಿದ್ದಾರೆ.









































































































error: Content is protected !!
Scroll to Top