ಬೆಳ್ಮಣ್‌ ಬಳಿ ಟ್ರಕ್‌ – ಖಾಸಗಿ ಬಸ್‌ ಡಿಕ್ಕಿ

ಕಾರ್ಕಳ : ಪಡುಬಿದಿರೆ – ಕಾರ್ಕಳ ಹೆದ್ದಾರಿಯ ಬೆಳ್ಮಣ್‌ ಸಮೀಪ ಸಾಂತೂರ್‌ಕೊಪ್ಪಲ ಎಂಬಲ್ಲಿ ಟ್ರಕ್‌ ಹಾಗೂ ಖಾಸಗಿ ಬಸ್‌ ಡಿಕ್ಕಿಯಾದ ಘಟನೆ ಆ. 16ರಂದು ಸಂಭವಿಸಿದೆ. ಕಾರ್ಕಳದಿಂದ ಪಡುಬಿದ್ರೆ ಮಾರ್ಗವಾಗಿ ಸಾಗುತ್ತಿದ್ದ ಟ್ರಕ್‌ ಹಾಗೂ ಮಂಗಳೂರು ಪಡುಬಿದ್ರೆ ಮಾರ್ಗವಾಗಿ ಕಾರ್ಕಳ ಕಡೆಗೆ ಚಲಿಸುತ್ತಿದ್ದ ಬಸ್‌ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಟ್ರಕ್‌ ಚಾಲಕ ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಟ್ರಕ್‌ ಖಾಸಗಿ ಬಸ್‌ ಮುಂಭಾಗ ನಜ್ಜುಗುಜ್ಜಾಗಿದೆ. ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದು ಅದೃಷ್ಟವಶಾತ್‌ ಯಾರಿಗೂ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.



















































error: Content is protected !!
Scroll to Top