ಬೆಳ್ಮಣ್‌ : ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳವು

ಕಾರ್ಕಳ : ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳವುಗೈದ ಘಟನೆ ಬೆಳ್ಮಣ್ ಗ್ರಾಮದ ಜಂತ್ರ ಎಂಬಲ್ಲಿ ಸಂಭವಿಸಿದೆ.
ಮನೆಯ ಯಜಮಾನಿ ಜ್ಯೂಲಿಯಾನ ಮಥಾಯಸ್ ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು, ಮನೆಯಲ್ಲಿ ಯಾರೂ ವಾಸ್ತವ್ಯವಿರಲಿಲ್ಲ. ಯಾರೋ ಕಳ್ಳರು ಜು. 28 ರಿಂದ ಆ. 10ರ ಅವಧಿಯಲ್ಲಿ ಮನೆಯ ಮುಂಬಾಗಿಲು ಮತ್ತು ಹಿಂಬಾಗಿಲಿನ ಬೀಗವನ್ನು ಮುರಿದು ಒಳ ಪ್ರವೇಶಿಸಿ ಅಡುಗೆ ಕೋಣೆಯಲ್ಲಿ ಸ್ಟೀಲಿನ ಡಬ್ಬದಲ್ಲಿ ಇರಿಸಿದ್ದ ಸುಮಾರು 15 ಗ್ರಾಂ ತೂಕದ, ಅಂದಾಜು 60,000 ರೂ. ಮೌಲ್ಯದ 6 ಜೋಡಿ ಕಿವಿಯ ಚಿನ್ನದ ಸಣ್ಣ ಓಲೆಗಳನ್ನು ಕಳವು ಮಾಡಿದ್ದಾರೆ. ಜ್ಯೂಲಿಯಾನ ಮಥಾಯಸ್ ಅವರ ಅಣ್ಣ ರಿಚಾರ್ಡ್ ಜೋನ್ ಸೆರಾವೋ ಅವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

















































error: Content is protected !!
Scroll to Top