ಹೆಬ್ರಿ : ಕಾರುಗಳ ಮುಖಾಮುಖಿ ಡಿಕ್ಕಿ – ಮಹಿಳೆಗೆ ಗಾಯ

ಹೆಬ್ರಿ : ಕಾರುಗಳು ಮುಖಾಮುಖಿಯಾಗಿ ಡಿಕ್ಕಿಯಾಗಿ ಮಹಿಳೆಯೋರ್ವರು ಗಾಯಗೊಂಡ ಘಟನೆ ಆ. 11ರಂದು ನಾಡ್ಪಾಲಿನಲ್ಲಿ ಸಂಭವಿಸಿದೆ. ಮಂಗಳೂರು ಪಡುಕೋಡಿಯ ಕೆ. ಸವಿನಯ ಅವರು ಕಾರಿನಲ್ಲಿ ತನ್ನ ತಾಯಿ ಕೆ. ಡಿ. ದೀಪಾ, ಹೆಂಡತಿ ದೀಪಾ ಮತ್ತು ತಂಗಿ ದಿವ್ಯ ಅವರೊಂದಿಗೆ ತೀರ್ಥಹಳ್ಳಿಯಿಂದ ವಾಪಾಸು ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಬರುತ್ತಿರುವಾಗ ನಾಡ್ಪಾಲು ಗ್ರಾಮದ ಜಕ್ಕನಮಕ್ಕಿ ಬಳಿ ಮುಂಭಾಗದಲ್ಲಿ ಅಂದರೆ ಹೆಬ್ರಿ ಕಡೆಯಿಂದ ಯಶವಂತ ಅವರು ಬರುತ್ತಿದ್ದ ಕಾರು ರಸ್ತೆಯ ತೀರಾ ಬಲ ಬಾಗಕ್ಕೆ ಬಂದು ಸವಿನಯ ಅವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕಾರಿನಲ್ಲಿದ್ದ ಕೆ. ಡಿ. ದೀಪಾ ಅವರರು ಗಾಯಗೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

















































error: Content is protected !!
Scroll to Top