ಮಳೆ ಹಾನಿ – ಪರ್ಪಲೆ, ನಿಟ್ಟೆ, ಬೋಳ, ಬೆಳ್ಮಣ್‌ ಪರಿಸರದಲ್ಲಿ ಭೂ ಕುಸಿತ

ಕಾರ್ಕಳ : ಮಳೆಯಿಂದಾಗಿ ತಾಲೂಕಿನೆಲ್ಲೆಡೆ ಭಾರಿ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ಹಲವೆಡೆ ಭೂ ಕುಸಿತ ಉಂಟಾಗಿ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಪರ್ಪಲೆ ಕುಂಟಲ್ಪಾಡಿ ರಾಜ್ಯ ಹೆದ್ದಾರಿ ಸಮೀಪದಲ್ಲಿ ಗುಡ್ಡ ಕುಸಿದಿದೆ ಮತ್ತು ರಾಜ್ಯ ಹೆದ್ದಾರಿ ಬಿರುಕು ಬಿದ್ದಿದೆ. ನಿಟ್ಟೆ ಗ್ರಾಮದ ಅತ್ತೂರು ಚರ್ಚ್ ರಸ್ತೆಯ ವಿಕ್ಟರ್ ಫರ್ನಾಂಡಿಸ್ ಎಂಬವರ ಮನೆಯ ಹಿಂಭಾಗದಲ್ಲಿ ಮತ್ತು ಲೆಮಿನ ಫ್ಯಾಕ್ಟರಿ ಬಳಿ ಗುಡ್ಡ ಕುಸಿತ ಉಂಟಾಗಿದೆ. ಬೋಳ ಗ್ರಾಮದ ಕಟ್ಟಿಂಗೇರಿಯಲ್ಲಿ ರಸ್ತೆ ಬದಿ ಹಾಗೂ ಬೆಳ್ಮಣ್ ಗ್ರಾಮದ ಇಂದಾರು ಎಂಬಲ್ಲಿನ ಡೈಮಂಡ್ ಹಿಲ್ ಅಪಾರ್ಟ್ಮೆಂಟ್ ಬಳಿ ಗುಡ್ಡ ಜರಿದಿರುತ್ತದೆ. ಹಿರ್ಗಾನ ಗ್ರಾಮದ ವಿಶಾಲಾಕ್ಷಿ ಶೆಟ್ಟಿಯವರ ಮನೆಗೆ ಹಾನಿಯಾಗಿದ್ದು 8000 ರೂ. ನಷ್ಟ ಸಂಭವಿಸಿದೆ. ಕಲ್ಯಾ ಗ್ರಾಮದ ಅಪ್ಪಿ ಮೊಯಿಲಿಯವರ ಮನೆ ಹಾನಿಗೊಳಗಾಗಿ 40 ಸಾ. ರೂ. ನಷ್ಟ ಸಂಭವಿಸಿದೆ.

ಮಳೆ ಪ್ರಮಾಣ
ಕಾರ್ಕಳ 142.6 ಮಿ. ಮೀ., ಇರ್ವತ್ತೂರು 108.2 ಮಿ.ಮೀ., ಅಜೆಕಾರು 104.2 ಮಿ.ಮೀ., ಸಾಣೂರು 148.8 ಮಿ. ಮೀ., ಕೆದಿಂಜೆ 128.0 ಮಿ. ಮೀ., ಮುಳಿಕಾರು 143.4 ಮಿ. ಮೀ. ಹಾಗೂ ಕೆರ್ವಾಶೆಯಲ್ಲಿ 117.4 ಮಿ. ಮೀ. ಮಳೆ ದಾಖಲಾಗಿದೆ.

ಪರ್ಪಲೆ ಕುಂಟಲ್ಪಾಡಿ ರಾಜ್ಯ ಹೆದ್ದಾರಿ
ಅತ್ತೂರು ಚರ್ಚ್ ರಸ್ತೆಯ ವಿಕ್ಟರ್ ಫರ್ನಾಂಡಿಸ್ ಎಂಬವರ ಹಿಂಭಾಗದಲ್ಲಿ ಗುಡ್ಡ ಕುಸಿತ
ಲೆಮಿನ ಫ್ಯಾಕ್ಟರಿ ಬಳಿ ಗುಡ್ಡ ಕುಸಿತ
ಬೋಳ ಗ್ರಾಮದ ಕಟ್ಟಿಂಗೇರಿಯಲ್ಲಿ ರಸ್ತೆ ಬದಿ ಗುಡ್ಡ ಕುಸಿತ
ಬೆಳ್ಮಣ್ ಡೈಮಂಡ್ ಹಿಲ್ ಅಪಾರ್ಟ್ಮೆಂಟ್ ಬಳಿ ಗುಡ್ಡ ಕುಸಿತ










































































error: Content is protected !!
Scroll to Top