ಮಾಜಿ ಚಾಲಕನೇ ದರೋಡೆ ಕೃತ್ಯದ ಮಾಸ್ಟರ್ ಮೈಂಡ್‌

ಮಂಗಳೂರು : ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಉಳಾಯಿಬೆಟ್ಟುವಿನ ಪಿಡಬ್ಲ್ಯುಡಿ ಗುತ್ತಿಗೆದಾರ ಪದ್ಮನಾಭ್ ಕೋಟ್ಯಾನ್ ನಿವಾಸದಲ್ಲಿ ಜೂ.21ರಂದು ನಡೆದ ದರೋಡೆಗೆ ಅವರ ಬಳಿಯಿದ್ದ ಮಾಜಿ ಚಾಲಕನೇ ಸಂಚು ರೂಪಿಸಿದ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ. ಗುತ್ತಿಗೆದಾರನಾಗಿರುವುದರಿಂದ ಮನೆಯಲ್ಲಿ ಕೋಟಿಗಟ್ಟಲೆ ಹಣ ಇರಬಹುದು ಎಂದು ಭಾವಿಸಿ ಅವರ ಈ ದರೋಡೆ ಕೃತ್ಯ ಎಸಗಿದ್ದರು.
ಆರೋಪಿಗಳು ಬಂದದ್ದು 100 ಕೋಟಿ ರೂ. ದೋಚಲು, ಆದರೆ ಅವರಿಗೆ ಸಿಕ್ಕಿದ್ದು ಬರೀ 9 ಲಕ್ಷ ರೂ. ಮಾತ್ರ. ಹಣ ಒಯ್ಯಲು 15 ಚೀಲಗಳು ಮತ್ತು ದೊಡ್ಡ ಕಾರನ್ನೇ ಅವರು ತಂದಿದ್ದರು. ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನೀರುಮಾರ್ಗ ಮೂಲದ ವಸಂತಕುಮಾರ್‌ (42), ರಮೇಶ್‌ (42) ಬಂಟ್ವಾಳ ನಿವಾಸಿ ರೇಮಂಡ್ ಡಿ ಸೋಜಾ ( 47), ಕಾಸರಗೋಡಿನ ಬಾಲಕೃಷ್ಣ ಶೆಟ್ಟಿ (48), ತೃಶ್ಶೂರ್‌ನ ಜಾಕೀರ್ ಹುಸೇನ್(56 ), ವಿನೋಜ್ ( 38) ಸಜೀಶ್ ಎಂಎಂ (32), ತಿರುವನಂತಪುರದ ಬಿಜು ಜಿ (41), ಸತೀಶ್ ಬಾಬು (44 ) ಶಿಜೋ ದೇಸಿ (38) ಬಂಧಿತರು.

ಜೂನ್ 21 ರಂದು ಮುಸುಕುಧಾರಿಗಳು ಮನೆಗೆ ನುಗ್ಗಿ ಪದ್ಮನಾಭ ಕೋಟ್ಯಾನ್‌, ಅವರ ಪತ್ನಿ ಮತ್ತು ಮಕ್ಕಳನ್ನು ಬೆದರಿಸಿ 9 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿದ್ದರು. ರಾತ್ರಿ 8 ಗಂಟೆ ವೇಳೆಗೆ ಸಂಭವಿಸಿದ ಈ ದರೋಡೆ ಕೃತ್ಯ ಮಂಗಳೂರು ನಗರ ಬೆಚ್ಚಿಬೀಳುವಂತೆ ಮಾಡಿತ್ತು. ಕೋಟ್ಯಾನ್‌ ಅವರು ತೀವ್ರ ಪ್ರತಿರೋಧೊಡ್ಡಿದಾಗ ಅವರ ಹಲ್ಲೆ ನಡೆಸಿ ಂನೆಯವರನ್ನು ಕಟ್ಟಿಹಾಕಿ ಬೆದರಿಸಿ ಹಣ ಮತ್ತು ಚಿನ್ನ ದರೋಡೆ ಮಾಡಿದ್ದಲ್ಲದೆ ಅವರ ಕಾರನ್ನೂ ಒಯ್ದಿದ್ದರು. ನಂತರ ಅವರ ಕಾರನ್ನು ಮಧ್ಯದಲ್ಲಿ ಬಿಟ್ಟು ತಾವು ಬಂದ ಇನ್ನೋವಾದಲ್ಲಿ ಪರಾರಿಯಾಗಿದ್ದರು.

ಆರೋಪಿಗಳ ವಸಂತ ಪೂಜಾರಿನಾಲ್ಕು ವರ್ಷಗಳಿಂದ ಲಾರಿ ಚಾಲಕರಾಗಿ ಪದ್ಮನಾಭ ಕೋಟ್ಯಾನ್‌ ಜತೆ ಕೆಲಸ ಮಾಡುತ್ತಿದ್ದ. ಈತನೇ ಮನೆಯಲ್ಲಿ ಅಪಾರ ಹಣ ಇದೆ ಎಂಬುದಾಗಿ ಉಳಿದ ಆರೋಪಿಗಳಿಗೆ ತಿಳಿಸಿದ್ದು, ಹೀಗಾಗಿ ಕೇರಳದ ಗ್ಯಾಂಗನ್ನು ಸೇರಿಸಿಕೊಂಡು ದರೋಡೆಗೆ ಪ್ಲಾನ್‌ ಮಾಡಿದ್ದರು. ಮನೆಯಲ್ಲಿ 100 ಕೋಟಿ ನಗದು ಇದೆಯೆಂದು ಕೇರಳ ತಂಡಕ್ಕೆ ರೇಮಂಡ್‌ ಡಿಸೋಜ ಮಾಹಿತಿ ನೀಡಿದ್ದ. ಜಾಕೀರ್‌ ಹುಸೇನ್‌ ತನಿಖೆಯ ದಿಕ್ಕಿ ತಪ್ಪಿಸಲು ಹಿಂದಿ ಭಾಷೆ ಮಾತನಾಡುತ್ತ ಪದ್ಮನಾಭ ಕೋಟ್ಯಾನ್‌ ಮೇಲೆ ಹಲ್ಲೆ ಮಾಡಿದ್ದ. ಮನೆ ಹೇಗಿದೆ ಎನ್ನುವುದರ ಬಗ್ಗೆ ಮನೆಯಲ್ಲಿ ಯಾರೆಲ್ಲ ಇದ್ದಾರೆಂದು ಆರೋಪಿಗಳಿಗೆ ಮಾಹಿತಿ ನೀಡಿದ್ದ. ಹಣ ಒಯ್ಯಲು ಆರೋಪಿಗಳು 15 ಚೀಲಗಳನ್ನು ರೆಡಿ ಮಾಡಿಕೊಂಡು ಬಂದಿದ್ದರು. ಇದೀಗ ಆರೋಪಿಗಳಿಂದ 9 ಲಕ್ಷ ರೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.















































error: Content is protected !!
Scroll to Top