ಸಂವಿಧಾನವನ್ನು ತುಳಿದು ಮೂಲಭೂತ ಸ್ವಾತಂತ್ರ್ಯವನ್ನು ಬುಡಮೇಲು ಮಾಡಿದ್ದ ಕಾಂಗ್ರೆಸ್‌

ಹೊಸದಿಲ್ಲಿ : ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕಾಂಗ್ರೆಸ್​ ಸಂವಿಧಾನವನ್ನು ತುಳಿದು, ಮೂಲಭೂತ ಸ್ವಾತಂತ್ರ್ಯವನ್ನು ಬುಡಮೇಲು ಮಾಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಭಾರತ ಕಂಡ ತುರ್ತು ಪರಿಸ್ಥಿತಿಗೆ 49ನೇ ವರ್ಷದ ಸಂದ ಸಂದರ್ಭದಲ್ಲಿ ಮೋದಿ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿ ಟ್ವೀಟ್‌ ಮಾಡಿದ್ದಾರೆ.
ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಕಾಂಗ್ರೆಸ್​ ಮೂಲಭೂತ ಸ್ವಾತಂತ್ರ್ಯವನ್ನು ಹೇಗೆ ಕೊನೆಗೊಳಿಸಿತು, ಪ್ರತಿಯೊಬ್ಬ ಭಾರತೀಯನು ಆಳವಾಗಿ ಗೌರವಿಸುವ ಭಾರತದ ಸಂವಿಧಾನವನ್ನು ಹೇಗೆ ತುಳಿಯಿತು ಎಂಬುದನ್ನು ಈ ದಿನ ನಮಗೆ ನೆನಪಿಸುತ್ತದೆ.
ಅಧಿಕಾರದಲ್ಲಿ ಉಳಿಯಲು ಆಗಿನ ಕಾಂಗ್ರೆಸ್​ ಸರ್ಕಾರ ಪ್ರಜಾಪ್ರಭುತ್ವದ ಪ್ರತಿಯೊಂದು ತತ್ವವನ್ನು ಕಡೆಗಣಿಸಿ ದೇಶವನ್ನು ಜೈಲಿನಂತೆ ಮಾಡಿತ್ತು ಎಂದು ಮೋದಿ ಬರೆದಿದ್ದಾರೆ. ಕಾಂಗ್ರೆಸ್​ ಪಕ್ಷವನ್ನು ಒಪ್ಪದ ಜನರಿಗೆ ಚಿತ್ರಹಿಂಸೆ ನೀಡಲಾಯಿತು, ದುರ್ಬಲ ವರ್ಗಗಳನ್ನು ಗುರಿಯಾಗಿಸಲು ಸಾಮಾಜಿಕವಾಗಿ ಪ್ರತಿಗಾಮಿ ನೀತಿಗಳನ್ನು ಜಾರಿಗೆ ತರಲಾಯಿತು. ತುರ್ತು ಪರಿಸ್ಥಿತಿ ಹೇರಿದವರಿಗೆ ನಮ್ಮ ಸಂವಿಧಾನದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುವ ಹಕ್ಕು ಇಲ್ಲ ಎಂದಿದ್ದಾರೆ. ಪತ್ರಿಕಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಮಸೂದೆ ತರಲಾಗಿತ್ತು, ಹಲವು ಸಂದರ್ಭಗಳಲ್ಲಿ 356ನೇ ವಿಧಿಯನ್ನು ವಿಧಿಸಿದವರು ಕೂಡ ಇವರೆ.
ಯಾವ ಪಕ್ಷದ ಕಾಲದಲ್ಲಿ ತುರ್ತು ಪರಿಸ್ಥಿತಿ ಹೇರಿತ್ತೋ ಆ ಪಕ್ಷ ಇನ್ನೂ ಜೀವಂತವಾಗಿದೆ. ಅವರು ತಮ್ಮ ಸೋಗಲಾಡಿತನದ ಮೂಲಕ ಸಂವಿಧಾನದ ಬಗೆಗಿನ ತಿರಸ್ಕಾರವನ್ನು ಮರೆಮಾಡುತ್ತಾರೆ. ಆದರೆ ಭಾರತದ ಜನರು ಅವರ ಕಾರ್ಯಗಳನ್ನು ನೋಡಿ ಮತ್ತೆ ಅವರನ್ನು ತಿರಸ್ಕರಿಸಿದ್ದಾರೆ ಎಂದಿದ್ದಾರೆ.
ಪ್ರಜಾಪ್ರಭುತ್ವವನ್ನು ಕೊಂದು, ಅದರ ಮೇಲೆ ಪದೇಪದೆ ದಾಳಿ ಮಾಡುವ ಸುದೀರ್ಘ ಇತಿಹಾಸವನ್ನು ಕಾಂಗ್ರೆಸ್​ ಹೊಂದಿದೆ. 1975ರಲ್ಲಿ ಈ ದಿನ ಕಾಂಗ್ರೆಸ್​ ಹೇರಿದ್ದ ತುರ್ತು ಪರಿಸ್ಥಿತಿಯೇ ಇದಕ್ಕೆ ಉದಾಹರಣೆ. ನಿರಂಕುಶ ಪ್ರಭುತ್ವದ ಕಾಂಗ್ರೆಸ್​ ಸರ್ಕಾರ ಒಂದೇ ಕುಟುಂಬದ ಅಧಿಕಾರದ ಸುಖಕ್ಕಾಗಿ ದೇಶದ ಎಲ್ಲ ನಾಗರಿಕ ಹಕ್ಕುಗಳನ್ನು 21 ತಿಂಗಳುಗಳ ಕಾಲ ಅಮಾನತುಗೊಳಿಸಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.





























































































































error: Content is protected !!
Scroll to Top