ತೆಳ್ಳಾರು : ಗಾಳಿ ಮಳೆಗೆ ವಿದ್ಯುತ್‌ ತಂತಿಗೆ ಬಿದ್ದ ಮರ

ಕಾರ್ಕಳ : ಬುಧವಾರ ರಾತ್ರಿ ಸುರಿದ ಧಾರಾಕಾರ ಗಾಳಿ ಮಳೆಗೆ ತೆಳ್ಳಾರು ರಸ್ತೆಯಲ್ಲಿ ಮರವೊಂದು ವಿದ್ಯುತ್‌ ಕಂಬಕ್ಕೆ ಬಿದ್ದಿದೆ.
ತೆಳ್ಲಾರು ಮುಂಡ್ಲಿ ರಸ್ತೆಯಲ್ಲಿ ತೆಳ್ಳಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಮರವೊಂದು ವಿದ್ಯುತ್‌ ಕಂಬದ ತಂತಿಗೆ ಬಿದ್ದಿದ್ದು, ವಿದ್ಯುತ್‌ ಕಂಬ ಸಂಪೂರ್ಣವಾಗಿ ನೆಲಕ್ಕೆ ವಾಲಿದೆ. ಪರಿಣಾಮವಾಗಿ ಜೂ. 20 ರಾತ್ರಿಯಿಂದ ತೆಳ್ಳಾರು ಮುಂಡ್ಲಿ ಪರಿಸರದಲ್ಲಿ ವಿದ್ಯುತ್‌ ಸ್ಥಗಿತಗೊಂಡಿದೆ. ಕಾರ್ಕಳ ಮೆಸ್ಕಾಂ ಇಲಾಖೆಯ ಬಿ ಶಾಖೆಯ ಸಿಬ್ಬಂದಿ ಮರ ತೆರವುಗೊಳಿಸಿ ವಿದ್ಯುತ್‌ ಸರಿಪಡಿಸುವ ಕಾರ್ಯ ಮಾಡುತ್ತಿದ್ದಾರೆ.































































error: Content is protected !!
Scroll to Top