ಜೂ. 2 : ಸ್ವಚ್ಛ ಕಾರ್ಕಳ ಬ್ರಿಗೇಡ್ 5ನೇ ವರ್ಷಾಚರಣೆ

ಕಾರ್ಕಳ : ಸ್ವಚ್ಛ ಕಾರ್ಕಳ ಬ್ರಿಗೇಡ್‌ನ 5ನೇ ವರ್ಷಾಚರಣೆಯ ಪ್ರಯುಕ್ತ ಜೂ. 2ರಂದು ಸಂಜೆ 4 ಗಂಟೆಗೆ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಸ್ವಚ್ಛ ಸಂಗಮ ಸ್ವಚ್ಛತಾ ವಿಚಾರ-ವಿನಿಮಯ ಕಾರ್ಯಕ್ರಮ ನಡೆಯಲಿದೆ.
ಸ್ವಚ್ಛ ಮಂಗಳೂರು ಮಿಷನ್ ಸಂಚಾಲಕ ರಂಜನ್ ಬೆಳ್ಳಿರ್ಪಾಡಿ ಮತ್ತು ಮಂಗಳೂರಿನ ಯೂನಿವರ್ಸಲ್ ನಾಲೆಜ್ ಟ್ರಸ್ಟ್ ಸ್ಥಾಪಕ ರೋಹನ್ ಎಂ. ಶಿರಿ ಅವರು ಪರಿಸರ ಸಂರಕ್ಷಣೆ ಮತ್ತು ಸ್ವಚ್ಛ ಭಾರತ ಪರಿಕಲ್ಪನೆಯಲ್ಲಿ ಯುವಕನತೆಯ ಪಾತ್ರ ಎಂಬ ವಿಷಯದ ಕುರಿತು ಹಾಗೂ ಡಾ. ಪ್ರಸನ್ನ ಕಾಕುಂಜೆ ಅವರು ಪ್ಲಾಸ್ಟಿಕ್ಕಿಗೆ ಪರ್ಯಾಯವೇನೆಂದು ಹುಡುಕುತ್ತಿದ್ದೀರಾ ಎಂಬ ವಿಷಯದ ಕುರಿತು ಸಂವಾದ ನಡೆಸಲಿದ್ದಾರೆ.

ಸಂಜೆ 5.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ವಿ. ಸುನಿಲ್ ಕುಮಾರ್ ಹಾಗೂ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟೀ ವಿವೇಕ್ ಆಳ್ವ ಭಾಗವಹಿಸಲಿರುವರು.

ರೀಲ್ಸ್ ಸ್ಪರ್ಧೆ
ಕಾರ್ಯಕ್ರಮದ ಅಂಗವಾಗಿ RRR – Reduce Reuse Recycle ಎಂಬ ವಿಷಯದ ಮೇಲೆ ರೀಲ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮೇ 30 ರೊಳಗೆ ರೀಲ್ಸ್‌‌ ಕಳುಹಿಸಿಕೊಡತಕ್ಕದ್ದು. ವಿಜೇತರಿಗೆ ಪ್ರಥನ ಸ್ಥಾನ 10,000 ರೂ., ದ್ವಿತೀಯ 5,000 ರೂ., ತೃತೀಯ ಸ್ಥಾನ ₹2,500 ರೂ. ನಗದು ಮತ್ತು ಬಹುಮಾನವನ್ನು ಸಭಾ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ. ಸ್ಪರ್ಧೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ 9900738703 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.





























































































































error: Content is protected !!
Scroll to Top