ಕಾರ್ಕಳ : ಪರವಾನಿಗೆ ರಹಿತವಾಗಿ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಮತ್ತು ಮರಳನ್ನು ಕಾರ್ಕಳ ನಗರ ಪೊಲೀಸರು ವಶಪಡಿಸಿಕೊಂಡ ಘಟನೆ ಕಾರ್ಕಳ ಕಸಬಾ ಗ್ರಾಮದಲ್ಲಿ ಸಂಭವಿಸಿದೆ.
ಶೇಖ್ ಶಪತ್ ಮತ್ತು ಮುಬಾರಕ್ ಅಡ್ಡೂರು ಎಂಬವರು ಮಂಗಳೂರು ಅಡ್ಡೂರು ಹೊಳೆಯ ಸರಕಾರಿ ಸ್ಥಳದಿಂದ ಅಕ್ರಮವಾಗಿ ಮರಳು ಕಳವು ಮಾಡಿಕೊಂಡು KA-19-D-9245 ನೇ ನೋಂದಾಯಿತ ಟಿಪ್ಪರ್ ಲಾರಿಯಲ್ಲಿ ಕಸಬಾ ಗ್ರಾಮದ ಅನಂತಶಯನದ ಬಳಿ ಸಾಗಾಟ ಮಾಡುತ್ತಿರುವಾಗ ಕಾರ್ಕಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಧನಂಜಯ ಬಿ.ಸಿ. ಅವರಿಗೆ ಬಂದ ಮಾಹಿತಿಯಂತೆ ದಾಳಿ ನಡೆಸಿ 3 ಯುನಿಟ್ ಮರಳು ಹಾಗೂ ಟಿಪ್ಪರ್ ಲಾರಿಯನ್ನು ಸ್ವಾದೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ.
ಮರಳು ಅಕ್ರಮ ಸಾಗಾಟ – ಟಪ್ಪರ್ ಪೊಲೀಸರ ವಶಕ್ಕೆ






























































