ಶಿರ್ಲಾಲು ಪ್ರೌಢಶಾಲೆಯ ವಿನಮ್ರಾ ಆಚಾರ್ಯ ಎಸ್ಸೆಸೆಲ್ಸಿ ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ

ಕಾರ್ಕಳ : ಶಿರ್ಲಾಲು ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ವಿನಮ್ರಾ ಆಚಾರ್ಯ 2023-24 ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ 606 ಅಂಕ ಗಳಿಸುವುದರೊಂದಿಗೆ ಕನ್ನಡ ಮಾಧ್ಯಮ ವಿಭಾಗದಲ್ಲಿ ಕಾರ್ಕಳ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ವಿನಮ್ರಾ ಕನ್ನಡ (125) ಮತ್ತು ಹಿಂದಿ ವಿಷಯದಲ್ಲಿ (100) ಪೂರ್ಣಾಂಕ ಪಡೆದಿದ್ದಾರೆ. ಸಮಾಜ ವಿಜ್ಞಾನ (99) ಇಂಗ್ಲೀಷ್ (97) ಅಂಕ ಪಡೆದಿದ್ದಾರೆ. ಸಂಸ್ಥೆಯ 46 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 43 ವಿದ್ಯಾಥಿಗಳು ಉತ್ತೀರ್ಣರಾಗಿರತ್ತಾರೆ. ಐವರು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಹಾಗೂ 6 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಶಾಲೆಯು ಕಲಿಕಾ ಗುಣಮಟ್ಟದಲ್ಲಿ A ಗ್ರೇಡನ್ನು ದಾಖಲಿಸಿದೆ. ಸಾಧಕ ವಿದ್ಯಾರ್ಥಿಗಳನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಗುಣಪಾಲ ಕಡಂಬ, ಕಾಲೇಜು ಸಿ.ಬಿ.ಸಿ ಅಧ್ಯಕ್ಷ ಶಾಂತಿರಾಜ್ ಜೈನ್, ಶಾಲಾ ಮುಖ್ಯ ಶಿಕ್ಷಕರು ಹಾಗೂ ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.

ಹಳೆ ವಿದ್ಯಾರ್ಥಿ ಸಂಘದಿಂದ ಅಭಿನಂದನೆ
ಶಿರ್ಲಾಲು ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ವಿನಮ್ರಾ ಆಚಾರ್ಯ ಅವರನ್ನು ಮೇ 13ರಂದು ಅವರ ಮನೆಯಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಶೀತಲ್ ಕುಮಾರ್ ಜೈನ್, ಕಾರ್ಯದರ್ಶಿ ಪ್ರಜ್ವಲ್‌ ಕುಮಾರ್‌, ಕೋಶಾಧಿಕಾರಿ ರವೀಂದ್ರ ಎಸ್.‌ ಅಮೀನ್‌ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.































































































































error: Content is protected !!
Scroll to Top