ದೇಶದಲ್ಲಿ ಮತ್ತೆ ಕೊರೊನ ಆತಂಕ : ಮಹಾರಾಷ್ಟ್ರದಲ್ಲಿ 90 ಪ್ರಕರಣ ಪತ್ತೆ

ಹೊಸದಿಲ್ಲಿ : ಭಾರತದಲ್ಲಿ ಮತ್ತೆ ಕೊರೊನ ಆತಂಕ ಶುರುವಾಗಿದೆ, ಮಹಾರಾಷ್ಟ್ರದಲ್ಲಿ 90ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಓಮಿಕ್ರಾನ್​ನ ಮತ್ತೊಂದು ತಳಿ ಇದಾಗಿದ್ದು ಅಮೆರಿಕದಲ್ಲಿ ಇದು ಅತಿ ವೇಗವಾಗಿ ಹರಡುತ್ತಿದೆ ಎನ್ನಲಾಗಿದೆ. 2024ರ ಜನವರಿಯಲ್ಲಿ ಈ ಹೊಸ ತಳಿ ಅಮೆರಿಕದಲ್ಲಿ ಮೊದಲ ಬಾರಿಗೆ ಪತ್ತೆಯಾಗಿತ್ತು. ಇದೀಗ ಹೊಸ ವೈರಸ್ ತಳಿ ಮಹಾರಾಷ್ಟ್ರದಲ್ಲಿ ಆತಂಕ ಸೃಷ್ಟಿಸಿದೆ.
ಪುಣೆಯಲ್ಲಿ 51 ಪ್ರಕರಣ, ಥಾಣೆಯಲ್ಲಿ 20 ಪ್ರಕರಣಗಳು ಪತ್ತೆಯಾಗಿವೆ. ಔರಂಗಾಬಾದ್, ಅಮರಾವತಿಯಲ್ಲಿ 7 ಪ್ರಕರಣಗಳು ಪತ್ತೆಯಾಗಿದ್ದರೆ, ಸೋಲಾಪುರದಲ್ಲಿ 2 ಪ್ರಕರಣ, ಅಹಮ್ಮದ್‌ನಗರ, ನಾಸಿಕ್, ಲಾತೂರ್ ಹಾಗೂ ಸಾಂಗ್ಲಿಯಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.

ಮಹಾರಾಷ್ಟ್ರದಲ್ಲಿ ಹೊಸ ಕೋವಿಡ್​-19 ಓಮಿಕ್ರಾನ್ ಸಬ್‌ವೇರಿಯಂಟ್ KP.2ನ 91 ಪ್ರಕರಣಗಳನ್ನು ದಾಖಲಿಸಿದೆ, ಇದು ಹಿಂದೆ ಪ್ರಬಲವಾಗಿದ್ದ JN.1 ರೂಪಾಂತರವನ್ನು ಮೀರಿಸುವಷ್ಟು ಶಕ್ತಿಶಾಲಿಯಾಗಿದೆ ಎನ್ನಲಾಗಿದೆ ಮತ್ತು ಈಗ ಹಲವಾರು ದೇಶಗಳಲ್ಲಿ ಸೋಂಕು ಹರಡುವಿಕೆಗೆ ಕಾರಣವಾಗುತ್ತಿದೆ.

ಮಾರ್ಚ್‌ನಲ್ಲಿ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿದ್ದು, ಸುಮಾರು 250 ಪ್ರಕರಣಗಳು ದಾಖಲಾಗಿವೆ. ಕೊರೊನಾ ಪ್ರಕರಣವು ಡಿಸೆಂಬರ್ 2019ರಲ್ಲಿ ಮೊದಲು ಬೆಳಕಿಗೆ ಬಂದಿತು. ಇದಾದ ಬಳಿಕ, ಇದು ಕ್ರಮೇಣ ಅನೇಕ ದೇಶಗಳಿಗೆ ವ್ಯಾಪಿಸಿತ್ತು, ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡರು. ಅಂದಿನಿಂದ, ಅದರ ಅನೇಕ ರೂಪಾಂತರಗಳು ಕಂಡು ಬಂದಿವೆ.

ಪ್ರಕರಣ ಪತ್ತೆ ಕುರಿತು ಪ್ರತಿಕ್ರಿಯೆ ನೀಡಿರುವ ಜಿನೋಮ್ ಸೀಕ್ವೆನ್ಸ್ ಪರೀಕ್ಷಾ ಸಂಪರ್ಕ ಅಧಿಕಾರಿ ಡಾ.ರಾಜೇಶ್, ಎಪ್ರಿಲ್-ಮೇ ತಿಂಗಳಲ್ಲಿ ಕೋವಿಡ್ ಮ್ಯೂಟೇಶನ್ ಪಡೆದುಕೊಂಡು ಹೊಸ ವೇರಿಯೆಂಟ್ ಆಗಿ ಹರಡುತ್ತದೆ. ಸದ್ಯ ಕೆಪಿ.2 ವೈರಸ್ ಪ್ರಕರಣ ತ್ವರಿತವಾಗಿ ಹರಡುತ್ತಿದೆ. ಆದರೆ ಆಸ್ಪತ್ರೆ ದಾಖಲು ಪ್ರಮಾಣ ಕಡಿಮೆ ಇದೆ. ಹೀಗಾಗಿ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.































































































































error: Content is protected !!
Scroll to Top