ಕಿರುಕುಳ ನೀಡಿದ ಮೌಲ್ವಿಯನ್ನು ಸಾಯಿಸಿದ ಮಕ್ಕಳು

ಜೈಪುರ : ನಿರಂತರ ಲೈಂಗಿಕ ಕಿರುಕುಳ ನೀಡುತ್ತಿದ್ದ ಮೌಲ್ವಿಯನ್ನು ಮಕ್ಕಳೆ ಸೇರಿ ಕೊಂದಿರುವ ಘಟನೆ ರಾಜಸ್ಥಾನದ ಅಜ್ಮೇರ್‌ನಲ್ಲಿ ಸಂಭವಿಸದೆ. ಮೊಹಮ್ಮದಿ ಮದೀನಾ ಮಸೀದಿಯ ಮೌಲ್ವಿ ಮೊಹಮ್ಮದ್​ ತಾಹಿರ್​ನನ್ನು ವಿದ್ಯಾರ್ಥಿಗಳು ಹತ್ಯೆ ಮಾಡಿದ್ದಾರೆ. ಮೌಲ್ವಿ ಕಳೆದ 4 ವರ್ಷಗಳಿಂದ ತಮ್ಮ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದ, ಹೀಗಾಗಿ ನಾವೇ ಅವನನ್ನು ಕೊಲೆ ಮಾಡಿದ್ದೇವೆ ಎಂದು ವಿದ್ಯಾರ್ಥಿಗಳು ಒಪ್ಪಿಕೊಂಡಿದ್ದಾರೆ. ಹತ್ಯೆ ಆರೋಪದ ಮೇಲೆ ಆರು ಅಪ್ರಾಪ್ತ ವಯಸ್ಸಿನ ಬಾಲಕರನ್ನು ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್‌ ತಾಹಿರ್‌ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ತೋರಿಸಿ ಅತ್ಯಾಚಾರವೆಸಗುತ್ತಿದ್ದ. ಇದರಿಂದ ಮನನೊಂದ ಮಕ್ಕಳು ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿ ಆತ ಗಾಢ ನಿದ್ದೆಯಲ್ಲಿದ್ದ ವೇಳೆ ತಲೆಗೆ ದೊಣ್ಣೆಯಿಂದ ಹೊಡೆದು, ಬಳಿಕ ಹಗ್ಗದಿಂದ ಕತ್ತುಬಿಗಿದು ಉಸಿರುಕಟ್ಟಿಸಿ ಕೊಲೆ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಗಾದರೂ ಹೇಳಿದರೆ, ಕೊಲ್ಲುವುದಾಗಿ ತಾಹಿರ್‌ ಬೆದರಿಕೆ ಹಾಕುತ್ತಿದ್ದ ಎಂದು ಮಕ್ಕಳು ಹೇಳಿದ್ದಾರೆ. ಮೌಲ್ವಿ ಜೊತೆ 15 ಮಕ್ಕಳು ವಾಸಿಸುತ್ತಿದ್ದರು. ಅದರಲ್ಲಿ 10 ಮಕ್ಕಳು ಈದ್‌ ದಿನ ತಮ್ಮ ಮನೆಗೆ ಹೋಗಿದ್ದರು. ಐದು ಮಕ್ಕಳು ಮಾತ್ರ ಅಲ್ಲಿ ಇದ್ದರು. ಏ.26ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.































































































































error: Content is protected !!
Scroll to Top