ಉಡುಪಿ : ಮಲ್ಪೆಯಲ್ಲಿ ಸಮುದ್ರ ಪಾಲಾಗುತ್ತಿದ್ದ ಇಬ್ಬರು ಯುವಕರನ್ನು ಜೀವರಕ್ಷಕರು ಬುಧವಾರ ರಕ್ಷಿಸಿದ್ದಾರೆ. ಬಳ್ಳಾರಿ ಕೊಟ್ಟೂರಿನ ಗೋಪಿನಾಥ್ (25) ಮತ್ತು ರಂಗನಾಥ (26) ಎಂಬ ಇಬ್ಬರು ಯುವಕರು ರಕ್ಷಿಸಲ್ಪಟ್ಟವರು.
ಆರು ಮಂದಿ ಯುವಕರ ಗುಂಪು ಪ್ರವಾಸ ಬಂದು ಸಮುದ್ರಕ್ಕೆ ಇಳಿದಿತ್ತು. ಇವರು ಸಮುದ್ರದಲ್ಲಿ ಈಜುತ್ತಿದ್ದಾಗ ಭಾರಿ ಅಲೆಯೊಂದು ತೀರಕ್ಕೆ ಅಪ್ಪಳಿಸಿದೆ. ಪರಿಣಾಮ ಇಬ್ಬರು ಯುವಕರು ಸಮುದ್ರದ ಪಾಲಾಗಿದ್ದಾರೆ. ಬಳಿಕ ಯುವಕರನ್ನು ಜೀವರಕ್ಷಕರು ರಕ್ಷಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಧಿಕಾರಿಗಳು ಸಮುದ್ರ ತೀರಕ್ಕೆ ಹೋಗುವವರಿಗೆ ತೀವ್ರ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ಜೊತೆಗೆ ನೀರಿಗೆ ಇಳಿಯುವವರು ಕೂಡ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.
ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ































































