ಡಾ. ಕೆ.ವಿ. ಶೆಣೈ ನಿಧನ

ಕಾರ್ಕಳ : ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ದೈಹಿಕ ನಿರ್ದೇಶಕ, ಕಾರ್ಕಳ ನಿವಾಸಿ ಡಾ. ಕೆ.ವಿ. ಶೆಣೈ (85) ಅವರು ಮೇ 8ರಂದು ನಿಧನ ಹೊಂದಿದರು. ಪುರಸಭೆ ಮಾಜಿ ಅಧ್ಯಕ್ಷ ಕೆ.ಪಿ. ಶೆಣೈ ಅವರ ಸಹೋದರರಾಗಿದ್ದ ಅವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತಿಮ ವಿಧಿ ಮೇ 9ರಂದು ಮಧ್ಯಾಹ್ನ ಕಾರ್ಕಳದಲ್ಲಿನ ಅವರ ಸ್ವಗೃಹದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.





























































































































error: Content is protected !!
Scroll to Top