ಮುದ್ರಾಡಿ : ಹಾಡಿಯಲ್ಲಿ ಮೃತದೇಹ ಪತ್ತೆ

ಹೆಬ್ರಿ : ಮುದ್ರಾಡಿ ಗ್ರಾಮದ ಹಾಡಿಯಲ್ಲಿ ಬಾಬು ಪೂಜಾರಿ (51) ಎಂಬವರ ಮೃತದೇಹ ಏ. 18ರಂದು ಪತ್ತೆಯಾಗಿದೆ. ಬಾಬು ಪೂಜಾರಿ ಮರ ಕಡಿಯುವ ಕೆಲಸ ಮಾಡಿಕೊಂಡಿದ್ದು, ಅವರಿಗೆ ವಿಪರೀತ ಕುಡಿತದ ಚಟವಿತ್ತು. ಅಲ್ಲದೆ ಫೀಟ್ಸ್ ಕಾಯಿಲೆಯಿಂದ ಬಳಲುತ್ತಿದ್ದರು. ಇವರು ಏ. 18ರಂದು ಬೆಳಿಗ್ಗೆ 10 ಗಂಟೆಯಿಂದ 10.30ರ ಮಧ್ಯಾವಧಿಯಲ್ಲಿ ಮುದ್ರಾಡಿ ಸರಕಾರಿ ಪ್ರಾಥಮಿಕ ಶಾಲೆಯ ಎದುರಿನ ಕೃಷ್ಣಯ್ಯ ಶೆಟ್ಟಿ ಎಂಬವರಿಗೆ ಸೇರಿದ ಹಾಡಿಯಲ್ಲಿ ಮೃತ ಪಟ್ಟಿದ್ದು, ಕುಡಿತದ ಚಟ ಹಾಗೂ ಫೀಟ್ಸ್ ಕಾಯಿಲೆಯಿಂದಾಗಿ ಮೃತ ಪಟ್ಟಿರಬಹುದಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.























































































































































error: Content is protected !!
Scroll to Top