ಕಾರ್ಕಳ : ಬಿಜೆಪಿ ಕಾರ್ಕಳ ಮಂಡಲದ ವತಿಯಿಂದ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮಸ್ಮರಣೆಯನ್ನು ವಿಕಾಸ ಕಚೇರಿಯಲ್ಲಿ ಆಚರಿಸಲಾಯಿತು.
ಕೇತ್ರಾಧ್ಯಕ್ಷ ನವೀನ್ ನಾಯಕ್ ಅಂಬೇಂಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಗೈದು ಮಾತನಾಡಿದ ಅವರು, ಭಾರತಿಯರಾದ ನಾವು ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಪುಷ್ಟಿ ನೀಡುವಲ್ಲಿ ಕೈ ಜೋಡಿಸಿ, ಅಂಬೇಡ್ಕರ್ ಜೀವನ ಚರಿತ್ರೆ ಮತ್ತು ಹೋರಾಟವನ್ನು ಮುಂಬರುವ ತಲೆಮಾರಿನವರಿಗೆ ತಿಳಿಸಿಕೊಡಬೇಕಾಗಿದೆ. ಭಾರತದ ಸಂವಿಧಾನವನ್ನು ಶ್ರೇಷ್ಠ ಸಂವಿಧಾನವನ್ನಾಗಿಸಿದ ಸಂವಿಧಾನ ಶಿಲ್ಪಿಗೆ ನಾವೆಲ್ಲರೂ ತಲೆ ಬಾಗೋಣ ಎಂದರು.
ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಬಿಜೆಪಿ ವಕ್ತಾರ ರವೀಂದ್ರ ಮೊಯಿಲಿ, ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ, ಪ್ರವೀಣ್ ಸಾಲ್ಯಾನ, ನಿರಂಜನ್ ಜೈನ್, ಶ್ರೀನಿವಾಸ್ ಕಾರ್ಲ, ತಾಲೂಕು ಯುವಮೋರ್ಚಾದ ಸದಸ್ಯರು ಉಪಸ್ಥಿತರಿದ್ದರು.
















































