ಕಾರ್ಕಳ : ನಗರದ ಕರಿಯಕಲ್ಲು ಪರಿಸರದಲ್ಲಿರುವ ಜಾನ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಬೇಸಿಗೆ ಈಜು ಶಿಬಿರ ಪ್ರಾರಂಭಗೊಂಡಿದೆ. ಬೆಳಿಗ್ಗೆ 8.30 ರಿಂದ 9.30,9.30 ರಿಂದ 10.30, ಸಂಜೆ 6 ರಿಂದ 7.00, 7.00 ರಿಂದ 8.00ರ ವರೆಗೆ ಈಜು ತರಬೇತಿ ನಡೆಯಲಿದೆ.
ಮಧ್ಯಮ ವಯಸ್ಕರಿಗೆ ರೂ.650, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ರೂ.550 ನೋಂದಣಿ ಶುಲ್ಕವಾಗಿದ್ದು ಈ ಪ್ಯಾಕೇಜ್‌ನಲ್ಲಿ ವಾಟರ್ ಪಾರ್ಕ್, ಸ್ವಿಮ್ಮಿಂಗ್ ಪೂಲ್, ಬ್ಯಾಡ್ಮಿಂಟನ್ ಆಡಲು ಅವಕಾಶವಿದೆ (ಬ್ಯಾಡ್ಮಿಂಟನ್ ರಾಕೆಟ್ ಆಟಗಾರರೇ ತರುವಂತದ್ದು) ಆಹಾರ ಪ್ಯಾಕೇಜ್‌ಗಳು ನೋಂದಣಿ ಮಾಡಿದವರಿಗೆ ಮಾತ್ರ ಲಭ್ಯವಿರಲಿದೆ. ನೋಂದಣಿ ಮಾಡಿ ನಾಲ್ಕು ಗಂಟೆಯವರೆಗೆ ಮಧ್ಯಮ ವಯಸ್ಕರಿಗೆ 300ರೂ., 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ರೂ.250 ನೋಂದಣಿ ಶುಲ್ಕವಾಗಿದ್ದು ಬ್ಯಾಡ್ಮಿಂಟನ್ ಮತ್ತು ಆಹಾರ ಪ್ಯಾಕೇಜ್ ಇರುವುದಿಲ್ಲ.
ಕೇವಲ ಸ್ಮಿಮ್ಮಿಂಗ್ ಫೂಲ್ ನೋಂದಣಿ ಶುಲ್ಕ 90 ನಿಮಿಷಗಳಿಗೆ ಮಧ್ಯಮ ವಯಸ್ಕರಿಗೆ ರೂ.100, 12ವರ್ಷ ವಯಸ್ಸಿನ ಮಕ್ಕಳಿಗೆ ರೂ.50, ಬೆಳಿಗ್ಗೆ 9.30 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಲಭ್ಯವಿರುತ್ತದೆ. ಈಜುಪಟುಗಳಿಗೆ ನೈಲಾನ್ ಬಟ್ಟೆ ಧರಿಸುವುದು ಕಡ್ಡಾಯವಾಗಿರುತ್ತದೆ. ನೈಲಾನ್ ಬಟ್ಟೆಗಳು ಬಾಡಿಗೆಗೆ ಕೂಡಾ ಲಭ್ಯವಿದೆ.

ಬ್ಯಾಡ್ಮಿಂಟನ್ ಪ್ರಿಯರಿಗಾಗಿ 6 ಅಂತಾರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣವಿದ್ದು 75 ನಿಮಿಷಗಳಿಗೆ ನೋಂದಣಿ ಶುಲ್ಕ ಮಧ್ಯಮ ವಯಸ್ಕರಿಗೆ ರೂ.100, ದ್ವಿತೀಯ ಪಿಯುಸಿವರೆಗಿನ ಮಕ್ಕಳಿಗೆ ರೂ.50 ಆಗಿರುತ್ತದೆ. ಆಟದ ಸಲಕರಣೆಗಳನ್ನು ಅಭ್ಯರ್ಥಿಗಳು ತರುವಂತದ್ದು. ಸ್ಟೇಡಿಯಂ ಬೆಳಿಗ್ಗೆ 6.30ರಿಂದ ರಾತ್ರಿ 10 ಗಂಟೆಯವರೆಗೆ ಲಭ್ಯವಿದೆ. ಬ್ಯಾಡ್ಮಿಂಟನ್ ಕಲಿಯಲು ಆಸಕ್ತರಿಗೆ ಕೋಚಿಂಗ್ ಲಭ್ಯವಿರುತ್ತದೆ.





















