ನಿಟ್ಟೆ : ಬೈಕ್‌ ಡಿಕ್ಕಿ – ಪಾದಚಾರಿಗಳಿಗೆ ಗಾಯ

ಕಾರ್ಕಳ : ಬೈಕ್‌ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಪಾದಚಾರಿಗಳು ಗಾಯಗೊಂಡ ಘಟನೆ ನಿಟ್ಟೆ ಗ್ರಾಮದಲ್ಲಿ ಏ. 11ರಂದು ರಾತ್ರಿ ಸಂಭವಿಸಿದೆ. ನಿಟ್ಟೆ ಮಸೀದಿ ಬಳಿ ಹಾದು ಹೋಗಿರುವ ಕಾರ್ಕಳ-ಪಡುಬಿದ್ರೆ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಬೈಕ್ ನಿಟ್ಟೆ ಕಡೆಯಿಂದ ಮಾವಿನಕಟ್ಟೆ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಯ ಹಾಗೂ ಅವರ ಸ್ನೇಹಿತ ಬಾಲಕೃಷ್ಣ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಇಬ್ಬರೂ ಗಾಯಗೊಂಡಿದ್ದಾರೆ. ಗಾಯಾಳುಳನ್ನು ಕಾರ್ಕಳ ಸಿ.ಟಿ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಬಾಲಕೃಷ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ಕಳುಹಿಸಿರುತ್ತಾರೆ. ಜಯ ಅವರು ನೀಡಿದ ಮಾಹಿತಿಯಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾರ್ಕಳ : ಬೈಕ್‌ ಕಳವು
ಪಾರ್ಕ್‌ ಮಾಡಿದ್ದ ಬೈಕ್‌ ಕಳವುಗೈದ ಘಟನೆ ಕಸಬಾ ಗ್ರಾಮದಲ್ಲಿ ಸಂಭವಿಸಿದೆ. ವಸಂತ ಎಂ. ಎಂಬವರು ಹಿರಿಯಂಗಡಿ ಶಿವತಿಕೆರೆ ಎಂಬಲ್ಲಿರುವ ಶ್ವೇತಾ ಕಾಂಪ್ಲೆಕ್ಸ್‌ನ ಕೆಳಗಡೆ ಏ. 8ರಂದು KA 18 EA 0965 ನೋಂದಾಯಿತ ಸ್ಪ್ಲೆಂಡರ್‌ ಪ್ರೋ ಬೈಕ್‌ನ್ನು ಪಾರ್ಕ್‌ ಮಾಡಿದ್ದು, ಕೀ ಯನ್ನು ಅದರಲ್ಲೇ ಇಟ್ಟಿರುತ್ತಾರೆ. ಮರುದಿನ ಬೆಳಗ್ಗೆ ನೋಡಿದಾಗ ಬೈಕ್‌ ಕಳವಾಗಿರುವುದು ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮುಡಾರು : ಕಲ್ಲಿನ ರಾಶಿಗೆ ಗೂಡ್ಸ್‌ ಲಾರಿ ಡಿಕ್ಕಿ
ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್‌ ಲಾರಿಯೊಂದು ಕಲ್ಲಿನ ರಾಶಿಗೆ ಡಿಕ್ಕಿ ಹೊಡೆದ ಘಟನೆ ಏ. 11 ರಂದು ರಾತ್ರಿ ಮುಡಾರು ಗ್ರಾಮದಲ್ಲಿ ಸಂಭವಿಸಿದೆ.
ಮುಡಾರು ಗ್ರಾಮದ ಬಜಗೋಳಿ ಜಂಕ್ಷನ್ ದಾಟಿ ಸ್ವಲ್ಪ ಮುಂದಕ್ಕೆ ಹಾದು ಹೋಗುವ ಕಾರ್ಕಳ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಸನ್ನ ಎಂಬವರು ಕಾರ್ಕಳ ಕಡೆಯಿಂದ ಕಡಾರಿ ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ ಗೂಡ್ಸ್‌ ಲಾರಿ ಹತೋಟಿ ತಪ್ಪಿ, ತೀರಾ ಎಡಬದಿಗೆ ಚಲಿಸಿ ಹೆದ್ದಾರಿ ಬದಿಯಲ್ಲಿ ಹಾಕಿದ್ದ ಕಲ್ಲಿನ ರಾಶಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಗೂಡ್ಸ್ ಲಾರಿಯ ಮುಂಭಾಗದ ಬಂಪರ್, ಸ್ಟೇರಿಂಗ್ ಬಾಕ್ಸ್ ಜಖಂಗೊಂಡಿದೆ. ಅಪಘಾತದಿಂದಾಗಿ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.





























































































































error: Content is protected !!
Scroll to Top