ಬೋರ್‌ವೆಲ್‌ಗೆ ಬಿದ್ದ ಮಗುವಿನ ರಕ್ಷಣೆಗೆ ಸಮರೋಪಾದಿ ಕಾರ್ಯಾಚರಣೆ

ವಿಜಯಪುರ : ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಮಗುವನ್ನು ರಕ್ಷಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ದೊಡ್ಡ ಬಂಡೆಯೊಂದು ಅಡ್ಡ ಸಿಕ್ಕಿದ ಕಾರಣ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಸತೀಶ್ ಮತ್ತು ಪೂಜಾ ದಂಪತಿಯ ಮಗು ಸಾತ್ವಿಕ್ ಆಟವಾಡಲು ಹೋಗಿದ್ದ ವೇಳೆ ಕೊಳವೆ ಬಾವಿಗೆ ಬಿದ್ದಿದೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಆಟವಾಡುತ್ತ ಕೊಳವೆ ಬಾವಿಗೆ ಬಿದ್ದಿದ್ದು, ರಾತ್ರಿಯಿಡೀ ರಕ್ಷಣಾ ಕಾರ್ಯ ನಡೆಸಲಾಗಿದೆ.

ಕೊಳವೆ ಬಾವಿಯ ಸುಮಾರು 16 ಅಡಿ ಆಳದಲ್ಲಿ ಮಗು ಸಿಕ್ಕಿಹಾಕಿಕೊಂಡಿದೆ. ಮಗುವಿಗೆ ಉಸಿರಾಟಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿಕೊಡಲಾಗಿದೆ.
ಇಂಡಿ ಗ್ರಾಮಾಂತರ ಠಾಣೆಯ ಪೊಲೀಸರು, ಅಗ್ನಿ ಶಾಮಕ ದಳ, ತಾಲೂಕು ಆಡಳಿತಾಧಿಕಾರಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.
ಏ. 2ರಂದು ಸತೀಶ್‌ ಅವರ ತಂದೆ ಶಂಕರಪ್ಪ ಮುಜಗೊಂಡ ಎರಡು ಬಾವಿ ತೋಡಿಸಿದ್ದರು. ಈ ಪೈಕಿ ಒಂದರಲ್ಲಿ ನೀರು ಸಿಕ್ಕಿದ್ದು, ಇನ್ನೊಂದು ವಿಫಲವಾಗಿತ್ತು. ವಿಫಲವಾದ ಬೋರನ್ನು ಮುಚ್ಚದೆ ಹಾಗೇ ಬಿಟ್ಟಿದ್ದರು. ನಿನ್ನೆ ನೀರು ಸಿಕ್ಕಿದ ಬೋರ್‌ವೆಲ್‌ಗೆ ಪಂಪ್‌ ಅಳವಡಿಸುತ್ತಿದ್ದ ವೇಳೆ ಮಗು ಆಟವಾಡುತ್ತಾ ಹೋಗಿ ವಿಫಲಗೊಂಡ ಬೋರ್‌ಗೆ ಬಿದ್ದಿದೆ. ಮಗು ಕಾಣೆಯಾಗಿದೆ ಎಂದು ಹುಡುಕಾಡುತ್ತಿದ್ದಾಗ ಮಗುವಿನ ಕಾಲಿನಲ್ಲಿದ್ದ ಗೆಜ್ಜೆಯ ಸದ್ದು ಬೋರ್‌ವೆಲ್‌ ಒಳಗಿಂದ ಕೇಳಿಬಂದಿದ್ದು, ಮಗು ಬೋರ್‌ವೆಲ್‌ನೊಳಗಿರುವ ವಿಷಯ ಗೊತ್ತಾಗಿ ಕೂಡಲೇ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಲಾಗಿದೆ.











































































error: Content is protected !!
Scroll to Top