ಎ. 11 – 27 : ಶಿವಪುರ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ – ಶ್ರೀ ಮನ್ಮಹಾರಥೋತ್ಸವ

ಹೆಬ್ರಿ : ಶಿವಪುರ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನದ ನೂತನ ಗರ್ಭಗುಡಿ ಹಾಗೂ ತೀರ್ಥ ಮಂಟಪದ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯಗೊಂಡಿದ್ದು, ಎ.11ರಿಂದ 27 ರವರೆಗೆ ನೂತನ ಗರ್ಭಗೃಹ ಸಮರ್ಪಣೆ, ಪುನ:ಪ್ರತಿಷ್ಠಾಬಂಧ, ಬ್ರಹ್ಮಕಲಶೋತ್ಸವ ಮತ್ತು ಶ್ರೀಮನ್ಮಹಾರಥೋತ್ಸವ ನಡೆಯಲಿದೆ.

ಹೊರೆಕಾಣಿಕೆ
ಎ. 11 ರಂದು ಸಂಜೆ 4 ಗಂಟೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮೆರವಣಿಗೆಯು ಶಿವಪುರ ಪಂಚಾಯತ್‌ ವಠಾರದಿಂದ ದೇವಸ್ಥಾನದವರೆಗೆ ಸಾಗಿ ಬರಲಿದೆ.

ಧಾರ್ಮಿಕ ಕಾರ್ಯಕ್ರಮ
ಎ. 11ರಿಂದ ಧಾರ್ಮಿಕ ಕಾರ್ಯಕ್ರಮ ಮೊದಲ್ಗೊಂಡು ಎ. 19ರವರೆಗೆ ನಡೆಯಲಿದೆ. ಪ್ರತಿನಿತ್ಯ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದ್ದು, ಎ. 15ರಂದು ಬೆಳಿಗ್ಗೆ 10.13ಕ್ಕೆ ಶ್ರೀ ದೇವರ ಪ್ರತಿಷ್ಠೆಯಾಗಲಿದೆ. ಎ. 18 ಬ್ರಹ್ಮಕುಂಭಾಭಿಷೇಕ ನೇರವೇರಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ಎ. 12ರಂದು ಸಂಜೆ 4.30ರಿಂದ ಭಾಗವತ ಪ್ರವಚನ, 7 ಗಂಟೆಗೆ ಸ್ಥಳೀಯ ಕಲಾವಿದರಿಂದ ನೃತ್ಯ ವೈಭವ ನಡೆಯಲಿದೆ.
ಎ. 13ರಂದು ಸಂಜೆ 4.30ರಿದ ಭಾಗವತ ಪ್ರವಚನ, 7 ಗಂಟೆಯಿಂದ ಸ್ಥಳೀಯ ಕಲಾವಿದರಿಂದ ಗುತ್ತುದ ಗುರ್ಕಾರೆ ನಾಟಕ ಪ್ರದರ್ಶನಗೊಳ್ಳಲಿದೆ.
ಎ. 14ರಂದು ಸಂಜೆ 4.30ರಿಂದ ಭಾಗವತ ಪ್ರವಚನ, 7 ಗಂಟೆಗೆ ಶ್ರೀ ಶಂಕರಕಲಾ ಪ್ರತಿಷ್ಠಾನ ಶಿವಪುರ ಇವರಿಂದ ಜಟಾಯೂಮೋಕ್ಷ, ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಎ.15ರಂದು ಮಧ್ಯಾಹ್ನ 12ರಿಂದ ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ ಇವರಿಂದ ಧಾರ್ಮಿಕ ಉಪನ್ಯಾಸ, ಸಂಜೆ 3.30ರಿಂದ ಶ್ರೀ ದೇವಿಯಾ ಕಲಾ ಸಂಘದವರಿಂದ ಸುಗಮ ಸಂಗೀತ ನಡೆಯಲಿದ್ದು, ರಾತ್ರಿ 8 ಗಂಟೆಯಿಂದ ನಾಟ್ಯಾಂಜಲಿ-ಭರತನಾಟ್ಯ ಹಾಗೂ ಕೂಚುಪುಡಿ ನೃತ್ಯ ನಡೆಯಲಿದೆ.
ಎ.16ರಂದು ಬೆಳಿಗ್ಗೆ 10ಗಂಟೆಗೆ ಭಾರತಿ ಗೋಪಾಲ್‌ ಶಿವಪುರ ಇವರಿಂದ ಸ್ಯಾಕ್ಸೋಫೋನ್‌ ವಾದನ, ಸಂಜೆ 4.30ರಿಂದ ಸ್ಥಳೀಯ ಕಲಾವಿದರಿಂದ ನಾಟ್ಯವೈವಿಧ್ಯ, ರಾತ್ರಿ 7 ಗಂಟೆಯಿಂದ ಶಿವಪ್ರಭಾ ಯಕ್ಷ ವಿಶ್ವ ಬಳಗ ಶಿವಪುರ ಇವರಿಂದ ಶಿವಭಕ್ತ ವೀರಮಣಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಎ. 17ರಂದು ಬೆಳಿಗ್ಗೆ 10ಗಂಟೆಗೆ ಪಾಂಡುಕಲ್ಲು ಉದಯ್‌ ಸೇರಿಗಾರ್‌ ಅವರಿಂದ ಸ್ಯಾಕ್ಸೋಫೋನ್‌ ವಾದನ, ಸಂಜೆ 4.30ರಿಂದ ಭಾಗವತ ಪ್ರವಚನ, ರಾತ್ರಿ 8 ಗಂಟೆಯಿಂದ ಕಾರ್ತಿಕ್‌ ಭಟ್‌ ಇನ್ನಂಜೆ ಮತ್ತು ಬಳಗದವರಿಂದ ಭಕ್ತಿ ಭಾವ ಗಾಯನ ನಡೆಯಲಿದೆ.
ಎ. 18ರಂದು ಬೆಳಿಗ್ಗೆ ನಾದಸ್ವರ ವಿದ್ವಾನ್‌ ಮೈಸೂರು ನಾರಾಯಣ ಮತ್ತು ಬಳಗದವರಿಂದ ನಾದಸ್ವರ ವಾದನ. 10.30ರಿಂದ ಭಾಗವತ ಉದ್ಯಾಪನೆ, ರಾತ್ರಿ 8 ಗಂಟೆಗೆ ಬೆಂಗಳೂರು ಆರಾಧನಾ ನೃತ್ಯ ತಂಡದವರಿಂದ ನೃತ್ಯಾರಾಧನೆ ನಡೆಯಲಿದೆ.
ಎ. 19ರಂದು ಬೆಳಿಗ್ಗೆ 8ಗಂಟೆಯಿಂದ ರಾತ್ರಿ 8ಗಂಟೆಯವರೆಗೆ ಸ್ಥಳೀಯ ಭಜನಾ ಮಂಡಳಿಯವರಿಂದ ಭಜನೋತ್ಸವ ನಡೆಯಲಿದೆ.

ಧಾರ್ಮಿಕ ಸಭಾ ಕಾರ್ಯಕ್ರಮ
ಎ.15ರಂದು ಸಂಜೆ 6 ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕುಕ್ಕೆ ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರು ಆಶೀರ್ವಚನ ನೀಡಲಿದ್ದು, ಉದಯ ಕೃಷ್ಣಯ್ಯ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ್‌ ಕುಮಾರ್‌ ಶೆಟ್ಟಿ ಮುನಿಯಾಲು ಅಧ್ಯಕ್ಷತೆ ವಹಿಸಲಿರುವರು.
ಎ.17ರಂದು ಸಂಜೆ 6ರಿಂದ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.

ಎ. 18ರಂದು ಸಂಜೆ 5ಗಂಟೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿರುವರು. ಶಾಸಕ ವಿ. ಸುನಿಲ್‌ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಹರಿಕಾ ಮಂಜುನಾಥ್‌ ಪ್ರಧಾನ ಉಪನ್ಯಾಸಕರಾಗಿ ಭಾಗವಹಿಸಲಿದ್ದಾರೆ.

ಕಾಲಾವಧಿ ರಥೋತ್ಸವ
ಎ.20ರಿಂದ 27ರವರೆಗೆ ಕಾಲಾವಧಿ ರಥೋತ್ಸವ ಜರುಗಲಿದೆ. ಪ್ರತಿ ನಿತ್ಯ ಪೂಜಾ ಕಾರ್ಯಗಳು ನಡೆಯಲಿದ್ದು, ಎ. 25ರಂದು ಸಂಜೆ 6 ಗಂಟೆಯಿಂದ ಶ್ರೀ ಮನ್ಮಹಾರಥೋತ್ಸವ ಜರುಗಲಿದೆ. ಎ. 27ರಂದು ಉತ್ಸವ ಮಾರಿಪೂಜೆ ನಡೆಯಲಿದೆ.











































































error: Content is protected !!
Scroll to Top