ಟಿಕೆಟ್ ಸಿಗದ ನಿರಾಶೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಸಂಸದ
ಚೆನ್ನೈ : ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದ ನೋವಿನಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ತಮಿಳುನಾಡಿನ ಸಂಸದ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಮಲಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (ಎಂಡಿಎಂಕೆ) ಪಕ್ಷದಿಂದ ಸಂಸದರಾಗಿದ್ದ ಎ.ಗಣೇಶಮೂರ್ತಿಗೆ ಈ ಸಲ ಸ್ಪರ್ಧಿಸಲು ಟಿಕೆಟ್ ನೀಡಿರಲಿಲ್ಲ. ಈ ನೋವಿನಲ್ಲಿ ಅವರು ಮಾ.24ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಸಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರು ಇಂದು ಬೆಳಗ್ಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
2019ರಲ್ಲಿ ಎಂಡಿಎಂಕೆ ಮತ್ತು ಡಿಎಂಕೆ ಮೈತ್ರಿ ಮಾಡಿಕೊಂಡಿದ್ದ ಕಾರಣ ಈರೋಡ್ ಕ್ಷೇತ್ರದಿಂದ ಗಣೇಶಮೂರ್ತಿ ಸ್ಪರ್ಧಿಸಿ ಗೆದ್ದಿದ್ದರು. ಈ ಸಲ ಮೈತ್ರಿ ಮುರಿದು ಬಿದ್ದ ಕಾರಣ ಗಣೇಶ್‌ಮೂರ್ತಿಗೆ ಟಿಕೆಟ್ ಸಿಕ್ಕಿರಲಿಲ್ಲ.
























