ಗೋದಾಮಿನಲ್ಲಿದ್ದ ಹತ್ತು ಸಾವಿರ ಸೀರೆ ವಶ

ಬೆಂಗಳೂರು: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲು ತಂದಿಟ್ಟಿದ್ದ ಬರೋಬ್ಬರಿ ಹತ್ತು ಸಾವಿರ ಸೀರೆಗಳನ್ನು ರಾಮನಗರದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಾಮನಗರದ ದ್ಯಾವರಸೇಗೌಡನದೊಡ್ಡಿಯಲ್ಲಿರುವ ಖಾಸಗಿ ಗೋದಾಮಿನಲ್ಲಿ ಸೀರೆಗಳನ್ನು ಇಡಲಾಗಿತ್ತು.
ಜೆಡಿಎಸ್​ ಕಾರ್ಯಕರ್ತರು ದಾಳಿ ಮಾಡಿ ಸೀರೆಗಳನ್ನು ಪತ್ತೆಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್​ನವರು ಸೀರೆಗಳನ್ನು ತರಿಸಿದ್ದಾರೆಂದು ಆರೋಪಿಸಲಾಗಿದೆ. ಸ್ಥಳಕ್ಕೆ ಡಿವೈಎಸ್​ಪಿ ದಿನಕರ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಮನಗರದ ದ್ಯಾವರಸೇಗೌಡನದೊಡ್ಡಿಯಲ್ಲಿ ಸೀರೆಗಳು ಪತ್ತೆಯಾಗಿರುವ ಬಗ್ಗೆ ಚುನಾವಣೆಗಾಗಿ ಸಂಗ್ರಹಿಸಿಟ್ಟಿದ್ದರಾ ಎಂಬ ಬಗ್ಗೆ ತನಿಖೆ ನಡೆಸುತ್ತೇವೆ. ಗೋದಾಮಿನಲ್ಲಿ ಪತ್ತೆಯಾದ ಸೀರೆಗಳು ಯಾರಿಗೆ ಸೇರಿದ್ದು ಎಂಬುದು ಗೊತ್ತಾಗಿಲ್ಲ. ಸೀರೆಗಳ ಬಿಲ್ ಹಾಗೂ ಸೀರೆಗಳ ಪ್ರಮಾಣಕ್ಕೆ ಅದು ಹೊಂದಾಣಿಕೆ ಆಗುತ್ತಿಲ್ಲ. ಸೀರೆಗಳ ಬಗ್ಗೆ ಲೆಕ್ಕ ಮಾಡಿ ನಾವು ಕೇಸ್ ರಿಜಿಸ್ಟರ್‌ ಮಾಡುತ್ತೇವೆ ಎಂದು ರಾಮನಗರ ಜಿಲ್ಲಾಧಿಕಾರಿ‌ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಹೇಳಿದ್ದಾರೆ.
ಇನ್ನೊಂದು ವಾಹನ‌ದಲ್ಲೂ ಸೀರೆ ತುಂಬಿಕೊಂಡು ಹೋದ ಆರೋಪ ಇದೆ. ವಾಹನ ಪತ್ತೆ ಹಚ್ಚಲು ಈಗಾಗಲೇ ಫ್ಲೈಯಿಂಗ್ ಸ್ಕ್ವಾಡ್ ಕಳುಹಿಸಲಾಗಿದೆ. ಎನ್​ಎಂ ಗ್ರಾನೈಟ್​ ಕಂಪನಿ ಹೆಸರಿನಲ್ಲಿ ಗುಜರಾತ್​​ನಿಂದ ಸೀರೆ ತರಿಸಲಾಗಿದೆ. ರಾಜಕೀಯ ಪಕ್ಷ ಅಥವಾ ನಾಯಕರ ಪೋಸ್ಟರ್,‌ ಭಾವಚಿತ್ರ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.



















































































error: Content is protected !!
Scroll to Top