ನೂತನ ಅಧ್ಯಕ್ಷರಾಗಿ ಕರುಣಾಕರ ಕೆ. ಆಯ್ಕೆ
ಕಾರ್ಕಳ : ಸಮೃದ್ದಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ (ನಿ.) ಕಾರ್ಕಳ ಇದರ 2024 -29 ಸಾಲಿನ ನೂತನ ಅಧ್ಯಕ್ಷರಾಗಿ ಕರುಣಾಕರ ಕೆ. ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಂಘದ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಉಪಾಧ್ಯಕ್ಷರಾಗಿ ಸುದರ್ಶನ ಆಚಾರ್ಯ, ನಿರ್ದೇಶಕರಾಗಿ ವಿಘ್ನೇಶ್ ಪ್ರಸಾದ್ ಕೆ., ಪ್ರದೀಪ್ ಕುಮಾರ್, ಧರ್ಮೇಂದ್ರ ಅಮೀನ್, ಹರಿಶ್ಚಂದ್ರ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿಗಾರ್, ಲತಾ ಆಯ್ಕೆಯಾಗಿದ್ದಾರೆ. ಸಹಕಾರಿ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಜಯರಾಮ್ ಚುನಾವಣಾಧಿಕಾರಿಯಾಗಿ ಹಾಗೂ ಜಗದೀಶ್ ಅವರು ಪರಿಶೀಲನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರೇಖಾ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.























