ಮರಳು ಅಕ್ರಮ ಸಾಗಾಟ : ಟಿಪ್ಪರ್‌ ಪೊಲೀಸರ ವಶಕ್ಕೆ

ಕಾರ್ಕಳ : ಪರವಾನಿಗೆ ರಹಿತವಾಗಿ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್‌ ಮತ್ತು ಮರಳನ್ನು ಕಾರ್ಕಳ ನಗರ ಪೊಲೀಸರು ವಶಪಡಿಸಿಕೊಂಡ ಘಟನೆ ಮಾ. 15ರಂದು ಸಂಭವಿಸಿದೆ.
ಸಂದೀಪ ಎಂಬಾತನು ಮಂಗಳೂರಿನ ಅಡ್ಡೂರು ಎಂಬಲ್ಲಿ ಹರಿಯುವ ನದಿಯಿಂದ ಅಡ್ಡೂರಿನ ಅಬ್ಬುಲ್ ಸತ್ತಾರ್ ಹಾಗೂ ಕಾರ್ಕಳದ ಪುಲ್ಕೇರಿ ರಾಜೇಶ ಎಂಬವರೊಂದಿಗೆ ಸೇರಿಕೊಂಡು ಅಕ್ರಮವಾಗಿ ಮರಳನ್ನು ಕಳವು ಮಾಡಿ ಟಿಪ್ಪರ್ ಲಾರಿಗೆ ಲೋಡ್ ಮಾಡಿಕೊಂಡು ಪುಲ್ಕೇರಿ ಜಂಕ್ಷನ್ ಕಡೆಯಿಂದ ಬಂಗ್ಲೆಗುಡ್ಡೆ ಜಂಕ್ಷನ್ ಕಡೆಗೆ ಸಾಗಾಟ ಮಾಡುತ್ತಿದ್ದಾಗ ಕಸಬಾ ಗ್ರಾಮದ ಕಾಬೆಟ್ಟು ಶ್ರೀ ವೇಣುಗೋಪಾಲ ದೇವಸ್ಥಾನದ ಜಂಕ್ಷನ್ ಬಳಿ ಕಾರ್ಕಳ ನಗರ ಠಾಣಾ ಪಿಎಸ್‌ಐ ಧನಂಜಯ ಬಿ. ಸಿ. ಅವರು ಸಿಬ್ಬಂದಿಯೊಂದಿಗೆ ಬೆಳಿಗ್ಗೆ 11.30ರ ವೇಳಗೆ ಟಿಪ್ಪರ್‌ ಲಾರಿಯನ್ನು ತಡೆಹಿಡಿದ್ದಾರೆ. 15,000/ ರೂ. ಮೌಲ್ಯದ ಸುಮಾರು 3 ಯುನಿಟ್ ಮರಳು ಹಾಗೂ 10,00,000/ ಮೌಲ್ಯದ ಈಚರ್ ಕಂಪೆನಿಯ ಟಿಪ್ಪರ್ ಲಾರಿಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









































































































error: Content is protected !!
Scroll to Top