ಕಾರ್ಕಳ : ಹಿರಿಯ ಪತ್ರಕರ್ತ, ಸಾಹಿತಿ, ರಂಗಭೂಮಿ ಹಾಗೂ ಚಲನಚಿತ್ರ ನಟ, ಕಾರ್ಯಕ್ರಮ ನಿರೂಪಕ ಮನೋಹರ್ ಪ್ರಸಾದ್ ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪತ್ರಿಕಾ ರಂಗಕ್ಕೆ ಅಪಾರ ನಷ್ಟ – ರೋಹಿತ್ ಕುಮಾರ್ ಕಟೀಲ್
ಮನೋಹರ ಪ್ರಸಾದ್ ಅವರ ನಿಧನಕ್ಕೆ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಕಾರ್ಯಕಾರಿ ನಿರ್ದೇಶಕ ರೋಹಿತ್ ಕುಮಾರ್ ಕಟೀಲ್ ಶೋಕ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ರಂಗದಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಮನೋಹರ್ ಪ್ರಸಾದ್ ಅವರು ಲೇಖನಿಯ ಮೂಲಕ ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ಮಾಡಿದ್ದರು. ಇದಲ್ಲದೆ ಓರ್ವ ರಂಗಭೂಮಿ ಮತ್ತು ಚಲನ ಚಿತ್ರ ನಟನಾಗಿಯೂ ಗುರುತಿಸಿಕೊಂಡಿರುವ ಅವರು ಯುವ ಪತ್ರಕರ್ತರಿಗೆ ಮತ್ತು ಕಲಾವಿದರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಬಂಧು ಮಿತ್ರರಿಗೆ, ಅಭಿಮಾನಿಗಳಿಗೆ, ಕುಟುಂಬದವರಿಗೆ ಅವರ ಅಗಲುವಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಶೋಕ ಸಂದೇಶದಲ್ಲಿ ರೋಹಿತ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮನೋಹರ್ ಪ್ರಸಾದ್ ಅವರ ಕೊಡುಗೆ ಅನನ್ಯ – ರವೀಂದ್ರ ಶೆಟ್ಟಿ
ಪತ್ರಿಕಾ ರಂಗ ಮತ್ತು ಸಮಾಜಕ್ಕೆ ಮನೋಹರ್ ಪ್ರಸಾದ್ ಅವರ ಕೊಡುಗೆ ಅನನ್ಯವಾದುದು. ಓರ್ವ ಪತ್ರಕರ್ತನಾಗಿ ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸವನ್ನು ಅವರು ಮಾಡಿರುವುದು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲೂ ಅವರು ತಮ್ಮನ್ನು ತೊಡಗಿಸಿಕೊಂಡಿರುವ ಬಗೆ ಸ್ಮರಣೀಯ. ಅವರ ಅಗಲುವಿಕೆ ತೀವ್ರ ದುಖವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ದುಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಫೆಡರೇಷನ್ ಆಫ್ ಕ್ವಾರಿ ಸ್ಟೋನ್ ಕ್ರಶರ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ ಸಂತಾಪ ಸೂಚಿಸಿದ್ದಾರೆ.
































































