ಬಹುಮಹಡಿ ಕಟ್ಟಡದಲ್ಲಿ ಬೆಂಕಿ ದುರಂತ : 43 ಸಾವು

ಢಾಕಾ : ಬಾಂಗ್ಲಾದೇಶದ ಢಾಕಾದಲ್ಲಿರುವ 6 ಅಂತಸ್ತಿನ ಶಾಪಿಂಗ್​ ಕಾಂಪ್ಲೆಕ್ಸ್​ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 43ಕ್ಕೇರಿದೆ. ಗುರುವಾರ ತಡರಾತ್ರಿ ಢಾಕಾದ ಜನನಿಬಿಢ ಪ್ರದೇಶದಲ್ಲಿರುವ ಗ್ರೀನ್‌ಕೋಜಿ ಕಾಟೇಜ್ ಶಾಪಿಂಗ್ ಮಾಲ್‌ನಲ್ಲಿ ದುರಂತ ಸಂಭವಿಸಿ 43 ಮಂದಿ ಸಜೀವ ದಹನಗೊಂಡಿದ್ದಾರೆ. ಮಾಲ್‌ನ ಮೊದಲ ಮಹಡಿಯಲ್ಲಿರುವ ಜನಪ್ರಿಯ ರೆಸ್ಟೊರೆಂಟ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕಟ್ಟಡದಾದ್ಯಂತ ವೇಗವಾಗಿ ಹರಡಿದಾಗ ಅನೇಕರು ಒಳಗೆ ಸಿಲುಕಿಕೊಂಡು ಸುಟ್ಟು ಕರಕಲಾದರು.

ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿಯಿದೆ. ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ ಅಗ್ನಿಶಾಮಕ ಸಿಬ್ಬಂದಿಯ ಸತತ ಪ್ರಯತ್ನಗಳ ಹೊರತಾಗಿಯೂ, ಬೆಂಕಿಯು 43 ವ್ಯಕ್ತಿಗಳ ಜೀವವನ್ನು ಬಲಿ ತೆಗೆದುಕೊಂಡಿತು, 60ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.

ಬೆಂಕಿಯ ಕಾರಣದ ಬಗ್ಗೆ ತನಿಖೆ ತನಿಖೆ ಮುಂದುವರಿದಿದ್ದು, ಈ ದುರಂತ ಘಟನೆಗೆ ಕಾರಣವನ್ನು ಶೀಘ್ರವೇ ಕಂಡುಹಿಡಿಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 40 ಮಂದಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಎರಡು ಗಂಟೆಗಳಲ್ಲಿ ಬೆಂಕಿಯನ್ನು ಹತೋಟಿಗೆ ತಂದರು ಎಂದು ಅವರು ಹೇಳಿದರು. 75 ಜನರನ್ನು ರಕ್ಷಿಸಲಾಗಿದೆ.































































































































error: Content is protected !!
Scroll to Top