ಪತ್ನಿ ಸಾವಿಗೀಡಾದ ನೋವಿನಲ್ಲಿ ಪತಿ ಅತ್ಮಹತ್ಯೆ

ಮಂಗಳೂರು : ಪತ್ನಿ ಹೃದಯಾಘಾತದಿಂದ ಸಾವಿಗೀಡಾದ ಬೆನ್ನಿಗೆ ಪತಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೈದ ದಾರುಣ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಚಾವಡಿಯಲ್ಲಿ ಗುರುವಾರ ಸಂಭವಿಸಿದೆ.

ಕೊಣಾಜೆ ಗ್ರಾಮಚಾವಡಿ ನಿವಾಸಿ ಮೀನಾಕ್ಷಿ ಪೂಜಾರಿ(59) ಮತ್ತು ಅವರ ಪತಿ ಶೇಷಪ್ಪ ಪೂಜಾರಿ(63) ಮೃತರು. ಮೀನಾಕ್ಷಿ ಅವರು ಸ್ಥಳೀಯ ಸ್ವಿಚ್‍ಬೋರ್ಡ್ ತಯಾರಿಕಾ ಸಂಸ್ಥೆಯಲ್ಲಿ ಕೆಲಸಕ್ಕಿದ್ದರೆ, ಶೇಷಪ್ಪ ಪೂಜಾರಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮೀನಾಕ್ಷಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ರಾತ್ರಿ ಮೀನಾಕ್ಷಿ ಆವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಪತಿ ಶೇಷಪ್ಪ ಪೂಜಾರಿ ಮತ್ತು ಅವರ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದ್ದರು. ರಾತ್ರಿ ಮನೆಗೆ ವಾಪಾಸ್ಸಾಗಿದ್ದ ಶೇಷಪ್ಪ ಪೂಜಾರಿ ಬುಧವಾರ ಬೆಳಗ್ಗಿನಿಂದಲೇ ಪತ್ನಿಯ ಅನಾರೋಗ್ಯದಿಂದ ಚಿಂತಿತರಾಗಿದ್ದರು. ಬೆಳಗ್ಗೆ ಆಸ್ಪತ್ರೆಗೆ ತೆರಳಿ ಸಂಜೆ ವಾಪಾಸ್ ಆಗಿದ್ದರು. ಸಂಜೆ ವೇಳಗೆ ಶೇಷಪ್ಪ ಆವರು ಮನೆಯೊಳಗಿದ್ದ ಸಂದರ್ಭದಲ್ಲಿ ಮೀನಾಕ್ಷಿ ಅವರ ಸಾವಿನ ಸುದ್ದಿಯನ್ನು ಸಂಬಂಧಿಕರೊಬ್ಬರು ತಿಳಿಸಿ ಪಕ್ಕದ ಅಂಗಡಿಗೆ ತೆರಳಿ ವಾಪಾಸಾದಾಗ ಶೇಷಪ್ಪ ಅವರು ಕೀಟನಾಶಕವನ್ನು ಕುಡಿದಿದ್ದರು. ಪಕ್ಕದ ಅಂಗಡಿಯವರು ಮತ್ತು ಸಂಬಂಧಿಕರು ಕೀಟನಾಶಕವನ್ನು ಎಳೆದು ತೆಗೆದು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಶೇಷಪ್ಪ ಪೂಜಾರಿ ದಂಪತಿ ಮತ್ತು ಮೀನಾಕ್ಷಿಯ ಸಹೋದರಿ ಮತ್ತು ಅವರ ಪತಿ ಒಂದೇ ಮನೆಯಲ್ಲಿ ವಾಸವಾಗಿದ್ದು, ಮಕ್ಕಳಿಲ್ಲದ ಕೊರಗು ಮತ್ತು ಅನಾರೋಗ್ಯದಿಂದ ಬೇಸತ್ತು ಪತ್ನಿ ಸಾವಿನ ಕೆಲವೇ ಗಂಟೆಯಲ್ಲಿ ತನ್ನ ಜೀವನವನ್ನು ಕೊನೆಗಾಣಿಸಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































































































































error: Content is protected !!
Scroll to Top