ಮಗುವಿನ ಚಿಕಿತ್ಸೆಗೆ ನೆರವು ಯಾಚನೆ

ಕಾರ್ಕಳ : ಬ್ರಹ್ಮಾವರ ತಾಲೂಕಿನ ಕೆಂಜೂರು ಗ್ರಾಮದ ಬೈದೆಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಚಂದ್ರಶೇಖರ-ಸುಮಿತ್ರಾ ದಂಪತಿಯ ಮೂರೂವರೆ ವರ್ಷದ ಪುತ್ರಿ ಧನ್ವಿತಾ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಈ ದಂಪತಿ ಸಾರ್ವಜನಿಕರ ನೆರವು ಯಾಚಿಸಿದ್ದಾರೆ.
ವಿಶ್ವಕರ್ಮ ಸಮುದಾಯದ ಚಂದ್ರಶೇಖರ ಸಂತೆಕಟ್ಟೆಯಲ್ಲಿ ಬಾಡಿಗೆ ಅಂಗಡಿಯಲ್ಲಿ ಫ್ಯಾಬ್ರಿಕೇಶನ್ ಕೆಲಸಮಾಡಿಕೊಂಡಿದ್ದಾರೆ. ಸ್ಥಿರ ಆದಾಯ ಇಲ್ಲದ ಕಾರಣ ಕುಟುಂಬ ಬಡತನದಲ್ಲೇ ಕಾಲ ಕಳೆಯುತ್ತಿದೆ. ಸುಮಿತ್ರಾ ಇತ್ತೀಚೆಗೆ ಗೇರುಬೀಜ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದು, ಇದರಿಂದ ಬರುವ ಆದಾಯವಷ್ಟೇ ಕುಟುಂಬಕ್ಕೆ ಆಧಾರ. ಮಣಿಪಾಲದ ಆಸ್ಪತ್ರೆಯ ವೈದ್ಯರು ಮಗುವನ್ನು ಪರಿಶೀಲಿಸಿ ಚಿಕಿತ್ಸೆಗೆ ಸುಮಾರು 8 ಲ. ರೂ. ಖರ್ಚಾಗಬಹುದು ಎಂದು ಹೇಳಿದ್ದಾರೆ. ದೀರ್ಘಕಾಲದ ಆಸ್ಪತ್ರೆ ವಾಸ, ಔಷಧ ಎಂದು ಇನ್ನೂ ಒಂದಷ್ಟು ಲಕ್ಷ ಬೇಕಾಗುತ್ತದೆ. ಜೀವನ ನಡೆಸುವುದೇ ಕಷ್ಟದಲ್ಲಿರುವ ದಂಪತಿ ಈಗ ಮಗುವಿನ ಜೀವ ಉಳಿಸಿಕೊಳ್ಳಲು ಸಹಾಯ ಯಾಚಿಸಿದ್ದಾರೆ. ಸಹಾಯ ಮಾಡಲು ಈಚ್ಚಿಸುವರು ಬ್ಯಾಂಕ್‌ ಆಫ್‌ ಬರೋಡ ಶಾಖೆಯ ಚಂದ್ರಶೇಖರ ಅವರ ಹೆಸರಿನಲ್ಲಿರುವ 81680100000152, IFSC : BARB0VJHEBR ಖಾತೆಗೆ ಅಥವಾ 9902368521 ಗೂಗಲ್‌ ಪೇ ನಂಬರ್‌ಗೆ ಹಣ ರವಾನಿಸಬಹುದು.





























































































































error: Content is protected !!
Scroll to Top