ಕಾಂತಾವರ : ಬಾವಿಗೆ ಬಿದ್ದ ಚಿರತೆ ರಕ್ಷಣೆ

ಕಾರ್ಕಳ : ಮೂಡುಬಿದಿರೆ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಕಾಂತಾವರದ ಪರಪ್ಪಾಡಿಯ ಶಿವಾನಂದ ಭಟ್‌ ಅವರಿಗೆ ಸಂಬಂಧಿಸಿದ ಬಾವಿಗೆ ಬಿದ್ದ ಚಿರತೆಯನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಚಿರತೆ ಬಾವಿಗೆ ಬಿದ್ದಿರುವ ಕುರಿತು ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯವರು ಚಿರತೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಿಯನ್ನು ಬೆನ್ನತ್ತಿಕೊಂಡು ಬಂದ ಚಿರತೆ ಆಯತಪ್ಪಿ ಬಾವಿಗೆ ಬಿದ್ದಿರಬಹುದು. ಅಲ್ಲದೆ ಚಿರತೆ ಬಲಹೀನಗೊಂಡಿದ್ದು ಬಾವಿಗೆ ಬಿದ್ದು ಸುಮಾರು ಮೂರ್ನಾಲ್ಕು ದಿನಗಳಾಗಿರಬಹುದು ಎನ್ನಲಾಗುತ್ತಿದೆ. ಚಿರತೆಗೆ ಪ್ರಥಮ ಚಿಕಿತ್ಸೆ ಮಾಡಿದ ಬಳಿಕ ಕುದುರೆಮುಖ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಬಿಡಲಾಯಿತು. ಈ ಕಾರ್ಯಾಚರಣೆಯಲ್ಲಿ ಕಾರ್ಕಳ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಮತ್ತು ಮೂಡುಬಿದಿರೆ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.





























































































































error: Content is protected !!
Scroll to Top