ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ

ಕಾರ್ಕಳ : ಸಾಂಸಾರಿಕ ಬಂಧನದೊಳಗಿದ್ದು ಸಾಮಾಜಿಕ ಕ್ರಾಂತಿ ಕೈಗೊಂಡ ಬಸವಣ್ಣ ತಮ್ಮ ಕಾಯಕನಿಷ್ಠೆಯ ಮೂಲಕ 12ನೇ ಶತಮಾನದಲಿದ್ದ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಿದರು. ವಚನ ಸಾಹಿತ್ಯದೊಂದಿಗೆ ಸಮಾಜ ಸುಧಾರಣೆಯ ಕೈಂಕರ್ಯದಲ್ಲಿ ತೊಡಗಿಕೊಂಡ ಬಸವಣ್ಣನವರ ಕಾಯಕನಿಷ್ಠೆಯನ್ನು ನಾವು ನಮ್ಮ ಜೀವನದಲ್ಲಿ ಪರಿಪಾಲನೆ ಮಾಡುವ ಮೂಲಕ ಸದೃಢ ಸಮಾಜ ನಿರ್ಮಿಸೋಣ ಎಂದು ತಹಶೀಲ್ದಾರ್‌ ನರಸಪ್ಪ ಅಭಿಪ್ರಾಯಪಟ್ಟರು.
ಅವರು ಫೆ. 17ರಂದು ತಾಲೂಕು ಕಚೇರಿಯಲ್ಲಿ‌ ಬಸವಣ್ಣನವರ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದರು.

ನೈತಿಕ ನೆಲೆಗಟ್ಟಿನಲ್ಲಿ ಸಮಾಜದಲ್ಲಿ ಬದಲಾವಣೆಯನ್ನು ತಂದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರನ್ನು ರಾಜ್ಯ ಸರಕಾರ ‘ವಿಶ್ವ ಗುರು ಬಸವಣ್ಣ -ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿ, ರಾಜ್ಯದ ಎಲ್ಲಾ ಸರಕಾರಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಅಳವಡಿಸುವಂತೆ ಆದೇಶ ಹೊರಡಿಸಿರುವುದು ಶ್ಲಾಘನೀಯ ಎಂದರು.
ಕಂದಾಯ ನಿರೀಕ್ಷಕ ರಿಯಾಜ್ ಕಾರ್ಯಕ್ರಮ‌ ನಿರ್ವಹಿಸಿದರು‌. ಈ ಸಂದರ್ಭ ವಿವಿಧ ಇಲಾಖಾ‌ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ‌









































































































error: Content is protected !!
Scroll to Top