ಸಿಮೆಂಟ್‌ ಮಿಕ್ಸರ್‌ ವಾಹನ ಡಿಕ್ಕಿ ಹೊಡೆದು ಸೂಪರ್‌ವೈಸರ್‌ ಸಾವು

ಅಜೆಕಾರು : ಪಡುಕುಡೂರು ಗ್ರಾಮದ ಭದ್ರಕಾಳಿ ದೇವಸ್ಥಾನದ ಬಳಿ ಫೆ. 14ರಂದು ರಸ್ತೆ ಕಾಮಗಾರಿ ಕಂಪನಿಯ ಸೂಪರ್‌ವೈಸರ್‌ ಅದೇ ಕಂಪನಿಯ ಸಿಮೆಂಟ್‌ ಮಿಕ್ಸರ್‌ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಭಾಷಿ ವೈ. ಅಪಘಾತಕ್ಕೆ ಬಲಿಯಾಗಿರುವ ನತದೃಷ್ಟ.
ಪಡುಕುಡೂರು ಗ್ರಾಮದ ಕೊಡಮಣಿತ್ತಾಯ ದೇವಸ್ಥಾನವರೆಗಿನ ಮುಖ್ಯರಸ್ತೆಯ ಕಾಮಗಾರಿಯನ್ನು ಕುಂದಾಪುರ ಮೂಲದ ದುರ್ಗಾ ಕನ್‌ಸ್ಟ್ರಕ್ಷನ್‌ ಕಂಪನಿ ನಿರ್ವಹಿಸುತ್ತಿದ್ದು, ಬುಧವಾರ ಸಂಜೆ 6 ಗಂಟೆ ವೇಳೆಗೆ ಇನ್ನೂ ನೋಂದಣಿಯಾಗದ ಹೊಸ ಸಿಮೆಂಟ್‌ ಮಿಕ್ಸರ್‌ ಅನ್ನು ಅದರ ಚಾಲಕ ಸಂಜು ಶರಣಪ್ಪ ಚಲಾಯಿಸುತ್ತಿದ್ದು ನಿಯಂತ್ರಣ ತಪ್ಪಿ ಭಾಷಿ ವೈ. ಅವರಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಭಾಷಿ ವೈ. ಅವರನ್ನು ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಲ್ಲಿಗೆ ತಲುಪುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು. ಈ ಕುರಿತು ಕಂಪನಿಯ ಮ್ಯಾನೇಜರ್‌ ಮೋಹನದಾಸ ಎಂಬವರು ನೀಡಿದ ದೂರಿನ ಪ್ರಕಾರ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





























































































































error: Content is protected !!
Scroll to Top