ವಿನಮ್ರವಾದ ಪ್ರಾರ್ಥನೆ ಫಲಭರಿತ : ಪೀಟರ್‌ ಪೌಲ್‌ ಸಲ್ಡಾನ

ಕಾರ್ಕಳ : ಪ್ರಸಿದ್ಧ ಅತ್ತೂರು ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬದ ಐದನೇ ದಿನದ ಮುಖ್ಯ ಬಲಿಪೂಜೆಯನ್ನು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪೀಟರ್‌ ಪೌಲ್‌ ಸಲ್ಡಾನ ನೆರವೇರಿಸಿದರು.

ವಿನಯದಿಂದ ಮಾಡಿದ ಪ್ರಾರ್ಥನೆ ಫಲಭರಿತವಾಗಿರುತ್ತದೆ. ನಮ್ಮ ಪ್ರಾರ್ಥನೆ ಅರ್ಥವಾಗಿರಬೇಕು, ನಿರಂತರವಾಗಿರಬೇಕು ಎನ್ನುವುದು ಏಸುಕ್ರಿಸ್ತರು ಕಲಿಸಿದ ದಾರಿ ಎಂದವರು ತಿಳಿಸಿದರು.

ಮಾಜಿ ಸಚಿವ ವಿನಯ್‌ ಕುಮಾರ್‌, ಸರಕಾರದ ಮುಖ್ಯಸಚೇತಕ ಐವನ್‌ ಡಿʼ ಸೋಜ, ಡಾ. ಅಂಶುವಾನ್‌, ಅಶೋಕ್‌ ಕುಮಾರ್‌ ಕೊಡವೂರು ಮುಂತಾದ ಗಣ್ಯರು ಐದನೇ ದಿನ ಪುಣ್ಯಕ್ಷೇತ್ರಕ್ಕೆ ಭೇಟಿಯಿತ್ತರು.


ಧರ್ಮಗುರುಗಳಾದ ಚಿಕ್ಕಮಗಳೂರು ಚರ್ಚ್‌ನ ಡೇವಿಡ್‌ ಪ್ರಕಾಶ್‌, ಪಡುಕೋಣೆ ಚರ್ಚ್‌ನ ಫ್ರಾನ್ಸಿಸ್‌ ಕರ್ನೆಲಿಯೊ, ಚಿಕ್ಕಮಗಳೂರು ಚರ್ಚ್‌ನ ರೊನಾಲ್ಡ್‌ ಕಾರ್ಡೊಜ, ಕಲ್ಯಾಣ್‌ಪುರ ಚರ್ಚ್‌ನ ವಲೇರಿಯನ್‌ ಮೆಂಡೋನ್ಸ, ಶಿವಮೊಗ್ಗ ಚರ್ಚ್‌ನ ಫ್ರಾಂಕ್ಲಿನ್‌ ಡಿಸೋಜ, ಸ್ಟ್ಯಾನಿ ಪಿಂಟೊ ಉಳಿದ ಪ್ರಾರ್ಥನೆಗಳನ್ನು ನೆರವೇರಿಸಿದರು.


ಐದನೇ ದಿನವೂ ಪುಣ್ಯಕ್ಷೇತ್ರಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಹರಿದುಬಂದಿದ್ದು, ವಾರ್ಷಿಕ ಹಬ್ಬದ ವೇಳೆ ಪುಣ್ಯಪುರುಷ ಸಂತ ಲಾರೆನ್ಸರ ದರ್ಶನ ಪಡೆದು ಪುನೀತರಾದರು. ದಿನದ ಅಂತಿಮ ಬಲಿಪೂಜೆಯನ್ನು ರಾತ್ರಿ 10 ಗಂಟೆಗೆ ಸಮರ್ಪಿಸಲಾಯಿತು.





































































































































error: Content is protected !!
Scroll to Top