ನಿಯಮ ಉಲ್ಲಂಘನೆ, ಜೀವ ಬೆದರಿಕೆ ಆರೋಪ
ಕಾರ್ಕಳ : ರಿಕ್ಷಾ ನಿಲ್ದಾಣದಲ್ಲಿ ನಿಯಮ ಉಲ್ಲಂಘನೆಯ ವಿಚಾರವಾಗಿ ಚಾಲಕರ ನಡುವೆ ಜಗಳ ಉಂಟಾಗಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಅಜೆಕಾರು ರಿಕ್ಷಾ ನಿಲ್ದಾಣದಲ್ಲಿ ಜ. 24ರಂದು ಸಂಭವಿಸಿದೆ.
ಸುಕೇಶ್ ಎಂಬವರು ರಿಕ್ಷಾ ನಿಲ್ದಾಣದಲ್ಲಿ ತಮ್ಮ ರಿಕ್ಷಾವನ್ನು ಸಾಲಿನಲ್ಲಿ ಮುಂದುಗಡೆ ನಿಲುಗಡೆ ಮಾಡಿದ್ದರು. ಪವಿತ್ರ ಎಂಬವರು ರಿಕ್ಷಾ ನಿಲುಗಡೆ ನಿಯಮವನ್ನು ಉಲ್ಲಂಘಿಸಿ ಪ್ರಯಾಣಿಕರನ್ನು ತನ್ನ ರಿಕ್ಷಾದಲ್ಲಿ ಕುಳ್ಳಿರಿಸಿಕೊಂಡು ಬಾಡಿಗೆಗೆ ಹೋಗಿದ್ದು, ಹಿಂತಿರುಗಿದ ಮೇಲೆ ರಿಕ್ಷಾ ನಿಲ್ದಾಣದ ನಿಯಮ ಉಲ್ಲಂಘಿಸಿದ ಬಗ್ಗೆ ಸುಕೇಶ್ ಪ್ರಶ್ನಿಸಿದಾಗ ಅವರನ್ನು ತಡೆದು ಪವಿತ್ರ ಎದೆಗೆ ಗುದ್ದಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸುಕೇಶ್ ನೀಡಿದ ದೂರಿನಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಇದೇ ವಿಚಾರವಾಗಿ ಪವಿತ್ರ ಸುಕೇಶ್ ವಿರುದ್ಧ ಈ ಮೊದಲು ದೂರು ದಾಖಲಿಸಿದ್ದು, ಸುಕೇಶ್ ಪವಿತ್ರ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿತ್ತು.































































