ರಾಜಾಪುರ ಸಾರಸ್ವತ ಕ್ರೆಡಿಟ್‌ ಕೋ ಅಪರೇಟಿವ್‌ ಸೊಸೈಟಿ

ಕಾರ್ಕಳ : ರಾಜಾಪುರ ಸಾರಸ್ವತ ಕ್ರೆಡಿಟ್‌ ಕೋ ಅಪರೇಟಿವ್‌ ಸೊಸೈಟಿಯ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕಡಾರಿ ರವೀಂದ್ರ ಪ್ರಭು ಹಾಗೂ ಉಪಾಧ್ಯಕ್ಷರಾಗಿ ನೀರೆ ರವೀಂದ್ರ ನಾಯಕ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಡಳಿತ ಮಂಡಳಿ ಚುನಾವಣೆ ಜ. 17ರಂದು ನಡೆದಿದ್ದು, ಜ. 25ರಂದು ಅಧ್ಯಕ್ಷರು, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
ರವೀಂದ್ರ ಪ್ರಭು ಅವರು ಸೊಸೈಟಿ ಸ್ಥಾಪನಾವಧಿಯಿಂದಲೂ ನಿರ್ದೇಶಕರಾಗಿ ಮತ್ತು ಸುದೀರ್ಘ ಅವಧಿಯಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ನೀರೆ ರವೀಂದ್ರ ನಾಯಕ್‌ ಅವರು ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ ಕುಮಾರ್‌ ಎಸ್.‌ ವಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.







































































































































error: Content is protected !!
Scroll to Top